ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧಪಕ್ಷಗಳು ಅಖಾಡ ರೆಡಿ ಮಾಡುತ್ತಿದೆ. 16 ವಿರೋಧಪಕ್ಷಗಳ ನಾಯಕರು ಸೇರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜೂನ್ 23 ರಂದು ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಎಡಪಕ್ಷದ ನಾಯಕ ಡಿ.ರಾಜಾ ಅವರು ಪ್ರತಿಪ...
ವೇಗವಾಗಿ ಚಲಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟು ಮಗ ಗಾಯಗೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಾನ್ ನ ಬದಿಯಲ್ಲಿ ಬೈಕನ್ನು ನಿಲ್ಲಿಸುವ ವೇಳೆ ಈ ಅವಘಡ ಸಂಭವಿಸಿದೆ. ಮೃತನನ್ನು ಪೊಲ್ಲಾಚಿಯ 38 ವರ್ಷದ ಜಾಕಿರ್ ಹುಸೇನ್ ಎಂದು ಗುರುತಿಸಲಾಗಿದೆ. ಇ...
ಮುಸ್ಲಿಂ ರಾಷ್ಟ್ರಗಳ ಮೇಲೆ 26,000 ಬಾಂಬ್ಗಳ ದಾಳಿ ನಡೆಸಿದವರು ಈಗ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ...
ಗುಜರಾತ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಹರಿಯಾಣ, ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿಯಂತಹ ರಾಜ್ಯಗಳಿಗೆ ಮಾನ್ಸೂನ್ ಆಗಮಿಸುತ್ತಿದ್ದಂತೆ ಭಾರತದ ಕೆಲವು ಭಾಗಗಳಲ್ಲಿ ಭಾನುವಾರ ಭಾರಿ ಮಳೆ ಸುರಿಯಿತು. ಭಾರೀ ಮಳೆಯಿಂದಾಗಿ ಕೆಲವು ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮಹಾರಾಷ್ಟ್ರದ ಕೆಲವು ಭಾಗಗಳಲ...
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳು ಮಣಿಪುರ ಮುಖ್ಯಮಂತ್ರಿಯನ್ನು ವಜಾಗೊಳಿಸುವ ಬಗ್ಗೆ ಅಭಿಪ್ರಾಯ ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಇಂದ...
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಜಿಪ್ಟ್ ದೇಶಕ್ಕೆ ಭೇಟಿ ಕೊಟ್ಟರು. ಇದೇ ವೇಳೆ ಅಲ್ಲಿನ ಅಧ್ಯಕ್ಷ ಅಬ್ದಲ್ ಫತ್ತಾಹ್ ಎಲ್–ಸಿಸಿ ಅವರು ಮೋದಿಗೆ ‘ಆರ್ಡರ್ ಆಫ್ ನೈಲ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರಿಗೆ ಸಿಕ್ಕಿದ ವಿವಿಧ ದೇಶಗಳ ಉನ್ನತ ಗೌರವ ಮತ್ತು ಪುರಸ್ಕಾರಗಳು 13ಕ್ಕೇರಿತ್ತು. ನೈಲ್ ಎಂಬುದು ಈಜಿಪ್...
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶದಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಈ ಘಟನೆಯು ದಿಲ್ಲಿ ರೈಲ್ವೇ ನಿಲ್ದಾಣದಲ್ಲಿರುವ ನಿರ್ಲಕ್ಷ್ಯ ಮತ್ತು ಸುರಕ್ಷತಾ ವೈಫಲ್ಯದ ಕುರಿತು ಪ್ರಶ್ನೆ ಮೂಡಿಸಿದೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂಬುವವರು ಇಂದು ಇಬ್ಬರು ಪರಿಚಿತ ಮಹಿಳೆಯ...
16 ವರ್ಷ ವಯಸ್ಸಿನವರು ಲೈಂಗಿಕ ವಿಚಾರದ ಬಗ್ಗೆ ತಮ್ಮದೇ ಆದ ಸಮ್ಮತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೇಘಾಲಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪೋಸ್ಕೋ ಅಡಿಯಲ್ಲಿ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಯೆಂಗ್ಡೋ ಅವರ ಪೀಠ ಈ ...
ಅಮೆರಿಕದ ರಾಜ್ಯ ಮೊಂಟಾನಾದಲ್ಲಿ ಯೆಲ್ಲೋಸ್ಟೋನ್ ನದಿಯನ್ನು ದಾಟುವ ಸೇತುವೆ ಕುಸಿದಿದೆ. ಇದೇ ವೇಳೆ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿದ್ದ ಸರಕು ರೈಲು ಹರಿಯುವ ನೀರಿನಲ್ಲಿ ಮುಳುಗಿದೆ. ಘಟನೆಯಲ್ಲಿ ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯ ಆಗಿರುವ ಬಗ್ಗೆ ವರದಿಯಾಗಿಲ್ಲ. ರೈಲು ಬಂಡಿಗಳು ಬಿಸಿ ಡಾಂಬರು ಮತ್ತು ಕರಗಿದ ಗಂಧ...
ಮದುವೆಗೆ ಮೊದಲು ಚುಂಬಿಸುವುದು, ಸ್ಪರ್ಶಿಸುವುದು ಸೇರಿದಂತೆ ಮುಂತಾದ ಯಾವುದೇ ಲೈಂಗಿಕ, ಕಾಮಪ್ರಚೋದಕ ಕೃತ್ಯಗಳನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಹೇಳಿದೆ. ಈ ಮೂಲಕ ಪೊಲೀಸರ ಕಿರುಕುಳದಿಂದ ರಕ್ಷಣೆ ಕೋರಿ ಅಂತರ್ ಧರ್ಮೀಯ ಲಿವ್ ಇನ್ ಸಂಬಂಧ ಹೊಂದಿರುವ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲ...