ವಿಜಯಪುರ: ಯುವಕನೋರ್ವ ಅರೆಬೆತ್ತಲಾಗಿ ಜಿಯೋ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿಯಲ್ಲಿ ನಡೆದಿದೆ. ಟವರ್ ನ ತುತ್ತತುದಿಯಲ್ಲಿ ಹೋಗಿ ನಿಂತ ಯುವಕ ಹುಚ್ಚಾಟ ಮೆರೆದಿದ್ದು, ಯುವಕ ಪಾನಮತ್ತನಾಗಿ ಟವರ್ ಏರಿದ್ದಾನೆ ಎಂದು ಹೇಳಲಾಗಿದೆ. ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ...
ಮಂಡ್ಯ: ಮಂಡ್ಯದ ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ 99 ಲಕ್ಷದ 20 ಸಾವಿರ ಹಣವನ್ನು ಚುನಾವಣಾಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರೇಟಾ ಕಾರಿನಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದ ಪೊಲೀಸರು ಕಾರು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ದಾಖಲೆ ...
ಕೊಟ್ಟಿಗೆಹಾರ:ದೇವರಮನೆಯಲ್ಲಿ ಕಾಡಾನೆಯೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರಾದ ಘಟನೆ ಸೋಮವಾರ ಸಂಜೆ ನಡೆದಿದೆ. ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವರಮನೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂ...
ಚಿಕ್ಕಮಗಳೂರು: ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದು, ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆ ಸುರಿದಿದೆ. [video width="640" height="360" mp4="https://www.mahanayaka.in/wp-content/uploads/2024/03/Rain.mp4"][/video] ಸಾಧಾರಣಕ್ಕಿಂತ ಜೋರಾಗೇ ಸ...
ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಕಲ್ಲಗುಡ್ಡೆಯಲ್ಲಿರುವ ಸ್ಮಶಾನದ ಉಳಿವಿಗಾಗಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಧ್ವನಿಯೆತ್ತಿತ್ತು. ಈ ಬಗ್ಗೆ ಅಜ್ಜಾವರ ಗ್ರಾಮ ಸಭೆಯಲ್ಲಿ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದೀಗ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸ್ಪಂದಿಸಿದೆ. ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್...
ದಾವಣಗೆರೆ: ಉಪವಾಸ ಅಂತ್ಯಗೊಳಿಸಿದ ನಂತರ ಮಸೀದಿ ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ಸೇವಿಸಿದ 19 ಮಕ್ಕಳು ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ. ಮಲೆಬೆನ್ನೂರಿನ ಜಾಮೀಯಾ ಮಸೀದಿ ಬಳಿ ಈ ಘಟನೆ ನಡೆದಿದೆ. ಉಪವಾಸ ಆಚರಿಸುತ್ತಿದ್ದ ಮಕ್ಕಳು ಉಪವಾಸ ಅಂತ್ಯ ಮಾಡಿದ ಬಳಿಕ ಮಸೀದಿ ...
ಮೂಡಿಗೆರೆ: ಬಿ.ಜೆ.ಪಿ. ಯಲ್ಲಿ ಉಂಟಾಗಿರುವ ಬಿರುಕು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿ.ಜೆ.ಪಿ. ಮಂಡಲ ಅಧ್ಯಕ್ಷರ ಆಯ್ಕೆಯ ಸಂಬಂಧ ಪಕ್ಷದೊಳಗೆ ಉದ್ಭವಿಸಿರುವ ಗೊಂದಲ ಮುಂದುವರಿದಿದೆ. ಇದೀಗ ನಾಳೆ ನಡೆಯಲಿರುವ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮೇಲೂ ಇದರ ಕರಿನೆರಳು ಬಿದ್ದಿದೆ. ನಾಳೆ ಮೂಡಿಗೆರ...
ಮಂಗಳೂರು: ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಮತ್ತೆ ಕಿಡಿಕಾರಿದ ಕೇಂದ್ರ ಸರಕಾರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಗುರುವಾರ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರು, ಮುಂದಿನ ಲೋಕಸಭೆ ಚುನಾವಣೆ...
ಉಪ್ಪಿನಂಗಡಿ: ಕಾಡಿನ ದಾರಿ ತಪ್ಪಿದ ಒಂಟಿ ಸಲಗವೊಂದು ನಾಡಿಗೆ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೊಗ್ರು, ಬೆದ್ರೋಡಿ, ನೀರಕಟ್ಟೆ ಪ್ರದೇಶದಲ್ಲಿ ನಡೆದಿದೆ. ನೇತ್ರಾವತಿ ನದಿ ಬದಿಯಲ್ಲಿ ವಿಹರಿಸಿದ ಕಾಡಾನೆ ಬೆದ್ರೋಡಿ, ವಳಾಲು, ನೀರಕಟ್ಟೆ ಪರಿಸರದಲ್ಲಿ ಸಂಚರಿಸಿತ್ತು. ಬಿಸಿಲಿನ ತಾಪಮಾನದಲ್ಲಿ ದೇಹವನ್ನು ತಣಿಸಲು ಸೊ...
ಮಂಗಳೂರು: ವಯೋವೃದ್ಧ ಮಾವನಿಗೆ ಸ್ಟೀಲ್ ವಾಕಿಂಗ್ ಸ್ಟಿಕ್ ನಿಂದ ಅಮಾನುಷವಾಗಿ ಥಳಿಸಿದ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕುಲಶೇಖರ ಎಂಬಲ್ಲಿ ಪದ್ಮನಾಭ ಸುವರ್ಣ ಎಂಬ 87 ವರ್ಷದ ವ್ಯಕ್ತಿಗೆ ಸೊಸೆ ಉಮಾ ಶಂಕರಿ ಎಂಬುವವರು ಥಳಿಸಿದ್ದಾರೆ. ಮಾರ್ಚ್ 9 ರಂದು ಘಟನೆ ನಡೆದಿದ್ದು, ವಾಕಿಂಗ್ ಸ್ಟಿಕ್ ಅನ್ನು ಬಳಸಿರುವುದರಿಂದ ವೃದ್ಧ ...