10:02 PM Thursday 21 - August 2025

ನಿರ್ಮಾಣ ಹಂತದ ಮನೆಯ ಟೆರೆಸ್‌ ನಿಂದ ಬಿದ್ದು ಆಟೋ ಚಾಲಕ ಸಾವು!

padmanabha
02/02/2024

ಕಾಸರಗೋಡು: ನಿರ್ಮಾಣ ಹಂತದ ಮನೆಯ ಟೆರೆಸ್‌ ನಿಂದ ಬಿದ್ದು ಆಟೋ ಚಾಲಕರೊಬ್ಬರು ಮೃತಪಟ್ಟಿರುವ ಘಟನೆ ಬಂದ್ಯೋಡ್‌ ಸಮೀಪದ ಕುಬಣೂರಿನಲ್ಲಿ ನಡೆದಿದೆ.

ಕುಬಣೂರಿನ ಪದ್ಮನಾಭ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಬಂದ್ಯೋಡ್‌ ಆಟೋಸ್ಟಾಂಡ್‌ ನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಗುರುವಾರ ಮನೆ ಸಮೀಪದ ಸ್ನೇಹಿತರೊಬ್ಬರ ಟೆರೆಸ್‌ ಗೆ ಹತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version