10:28 PM Friday 11 - September 2026

ತನ್ನ ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿದ ಆಟೋ ಚಾಲಕ | ಇವರು ಉಳಿಸಿದ ಪ್ರಾಣ ಎಷ್ಟು ಗೊತ್ತಾ?

javed khan
30/04/2021

ಭೋಪಾಲ್: ದೇಶದಲ್ಲಿ ಕೊರೊನಾ ಅಲೆ ಎರಡನೇ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ 34 ವರ್ಷ ವಯಸ್ಸಿನ ಆಟೋ ಚಾಲಕ ತನ್ನ ಜೀವನಾಧಾರವಾಗಿದ್ದ ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದು, ಕೊರೊನಾ ಸೋಂಕಿತರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.

ಭೋಪಾಲ್ ನ ಐಶ್‌ ಬ್ಯಾಗ್ ನಿವಾಸಿ ಜಾವೇದ್ ಖಾನ್ ಈ ಸೇವೆಯನ್ನು ಮಾಡುತ್ತಿರುವವರಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಕನಿಷ್ಠ 15 ಜನರ ಪ್ರಾಣವನ್ನು ಉಳಿಸಿದ್ದಾರೆ.

ಜಾವೇದ್ ಖಾನ್ ಅವರಿಗೆ ಮೂರು ಮಕ್ಕಳಿದ್ದಾರೆ. ಈ ಆಟೋವನ್ನು ಓಡಿಸಿಯೇ ಅವರು ಜೀವನ ಸಾಗಿಸುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಹಾಗಾಗಿ ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡೋಣ ಎನ್ನುವ ದೃಷ್ಟಿಯಿಂದ ತನ್ನ ಪತ್ನಿಯ ಚಿನ್ನದ ಹಾರವನ್ನು 5 ಸಾವಿರ ರೂಪಾಯಿಗೆ ಮಾರಾಟ ಮಾಡಿ, ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿ ಸಾರ್ವಜನಿಕರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.

ಇನ್ನೂ ಆಟೋಗೆ 7 ಕೆಜಿ ಆಮ್ಲಜನಕ ಸಿಲಿಂಡರ್ ನ್ನು ಸಾಮಾಜಿಕ ಕಾರ್ಯಕರ್ತರಾಗಿರುವ ಭಾರ್ತಿ ಜೈನ್ ಎಂಬವರು ನೀಡಿದ್ದು, ಜಾವೇದ್ ಖಾನ್ ಅವರ ಪರಿಶ್ರಮಕ್ಕೆ ಸಾಥ್ ನೀಡಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler
Exit mobile version