3:32 AM Friday 11 - September 2026

ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವೆ ಜೊಲ್ಲೆ ವಿರುದ್ಧ ತಿರುಗಿ ಬಿದ್ದ ಗೋಮಾತೆ | ಸಚಿವರಿಗೆ ತಿವಿಯಲು ಯತ್ನ

gomata
28/09/2021

ಬೆಳಗಾವಿ:  ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಗೋಮಾತೆ ತಿರುಗಿ ಬಿದ್ದ ಘಟನೆ ನಡೆದಿದ್ದು, ಕಾಳು ತಿನ್ನಿಸಲು ಸಚಿವರು ಮುಂದಾಗುತ್ತಿದ್ದಂತೆಯೇ ಗೋವು ಸಚಿವರ ಮೇಲೇರಿ ಬಂದಿದೆ ಎಂದು ವರದಿಯಾಗಿದ್ದು, ಈ ವೇಳೆ ಸಚಿವರು ಬೆದರಿ ಹಿಂದಕ್ಕೆ ಸರಿದಿದ್ದಾರೆ.

ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಬೆಳಗಾವಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ್ ಶಾ ಮನೆಯಲ್ಲಿ ಗೋವಿಗೆ ಧವಸ ಧಾನ್ಯ ತಿನ್ನಿಸಲು ಮುಂದಾಗಿದ್ದಾರೆ. ಈ ಸಚಿವರನ್ನು ಕಂಡು ಆಕ್ರೋಶಗೊಂಡ ಗೋಮಾತೆ ಏಕಾಏಕಿ ಸಚಿವರತ್ತ ಏರಿ ಬಂದಿದೆ. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸಚಿವರು ಬದಿಗೆ ಸರಿದು ಗೋವಿನ ತಿವಿತದಿಂದ ತಪ್ಪಿಸಿಕೊಂಡಿದ್ದಾರೆ.

ಇನ್ನೂ ಗೋವು ಕೋಪದಿಂದ ನಾಲ್ಕು ಜನರನ್ನು ತಿವಿದಿದೆ. ಈ ವೇಳೆ ಕುರ್ಚಿಗಳು ಕೂಡ ಒಡೆದುಹೋಗಿವೆ ಎಂದು ವರದಿಯಾಗಿದೆ. ಬಳಿಕ ನಾಲ್ವರು ಹರಸಾಹಸ ಪಟ್ಟು ಗೋವನ್ನು ಬಲವಂತವಾಗಿ ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಚಿವರು ಅಕ್ಕೋಳ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ. ಕಾಳು ತಿನ್ನಿಸಲೆಂದು ಸಚಿವರು ಹೋಗುತ್ತಿದ್ದಂತೆಯೇ ಗೋಮಾತೆ ತಿರುಗಿ ಬಿದ್ದಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಕಡಬ: ಕಾನ್ ಸ್ಟೇಬಲ್ ನಿಂದ ಅತ್ಯಾಚಾರ ಪ್ರಕರಣ | ಇಂದು ನಡೆದ ಬೆಳವಣಿಗೆಗಳೇನು?

ಆರೆಸ್ಸೆಸ್ ನದ್ದು ತಾಲಿಬಾನ್ ಸಂಸ್ಕೃತಿ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ | ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದಲ್ಲಿ ಆಪರೇಷನ್ ಹಸ್ತ ಆರಂಭ? | ಬಿಜೆಪಿಯ ಮೊದಲ ವಿಕೆಟ್ ಪತನ?

ಗೋಶಾಲೆ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ಎಕರೆ ಪ್ರದೇಶಕ್ಕೆ ಗುರುತು | ಸಚಿವ ಎಸ್.ಅಂಗಾರ

ಭಾರತೀಯರಿಗೆ ಶಾಕಿಂಗ್ ನ್ಯೂಸ್ | ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ

ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಭಾರತ್ ಬಂದ್: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಸಾವಿರಾರು ವಾಹನಗಳು

ಮದುವೆ ದಿನ ಮಂಟಪದಿಂದ ಕಾರಿನಲ್ಲಿ ತೆರಳುವಾಗ ಜೋರಾಗಿ ಅತ್ತ ವರ!

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version