3:35 AM Sunday 14 - September 2025

ಬಿ.ಆರ್. ಪಾಟೀಲ್ ರಾಜೀನಾಮೆ ಕೊಡಲ್ಲ: ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು: ಸಚಿವ ಎಂ.ಬಿ. ಪಾಟೀಲ್

m b pateel
29/11/2023

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಶಾಸಕ ಬಿ.ಆರ್. ಪಾಟೀಲ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, ಬಿ.ಆರ್ ಪಾಟೀಲ್ ನಮಗೆಲ್ಲಾ ಹಿರಿಯ ನಾಯಕರು. ಅವರ ಮೇಲೆ ಅಪಾರ ಗೌರವ ನಮಗಿದೆ. ಅವರು ಸಜ್ಜನ ರಾಜಕಾರಣಿ. ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವರು. ನಾನು ಚಿಕ್ಕವನಿಂದ ಅವರನ್ನ ನೋಡಿದ್ದೇನೆ. ಅವರ ನೋವನ್ನ ಅವರು ಹೇಳಿದ್ದಾರೆ. ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪಲ್ಲ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪಗಳು ಸಹಜ. ಬಿ.ಆರ್. ಪಾಟೀಲ್ ಸೂಕ್ಷ್ಮ ಸ್ವಭಾವದವರುಹೀಗಾಗಿ ಎಮೋಷನಲ್ ಆಗಿ ಈ ರೀತಿ ಪತ್ರ ಬರೆದಿರಬಹುದು. ನಾನು ಆ ಪತ್ರ ನೋಡಿಲ್ಲ. ಸಿಎಂ ಅವರು ಬಿ.ಆರ್. ಪಾಟೀಲ್ ಜೊತೆ ಮಾತಾಡ್ತಾರೆ. ಅವರ ಘನತೆಗೆ ಧಕ್ಕೆ ಬಾರದಂತೆ ತನಿಖೆ ಮಾಡುತ್ತಾರೆ.ಅವರು ರಾಜೀನಾಮೆ ಕೊಡಲ್ಲ. ಸಿಎಂ ಮತ್ತು ಸಂಬಂಧಿಸಿದ ಸಚಿವರು ತನಿಖೆ ಬಗ್ಗೆ ಗಮನ ಹರಿಸುತ್ತಾರೆ.

ಪತ್ರ ಬರೆದರೆ ತಪ್ಪೇನಿದೆ..? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳು ಆಪಾದನೆ ಮಾಡಿದೆ ಹೀಗೆಲ್ಲಾ ಪತ್ರದಲ್ಲಿದೆ. ಪತ್ರ ಬರೆದು ಉತ್ನತ ಮಟ್ಟದ ನೈತಿಕತೆ ಮೆರೆದಿದ್ದಾರೆ.ಪತ್ರ ಬರೆದಿದ್ದಕ್ಕೆ ಪ್ರಶಂಸಿಸಬೇಕು. ಸಿಎಂ, ಹಾಗೂ ಸಚಿವರು ತನಿಖೆ ಮಾಡಿಸುತ್ತಾರೆಂದರು.

ಇತ್ತೀಚಿನ ಸುದ್ದಿ

Exit mobile version