5:31 AM Saturday 15 - November 2025

ನಿಜವಾಗಿಯೂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ಬಬಿಯಾ ಸಸ್ಯಾಹಾರಿಯೇ?

babia
10/10/2022

ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ದೈವೀ ಸ್ವರೂಪಿ ಮೊಸಳೆ ಬಬಿಯಾ ಇಹಲೋಕ ತ್ಯಜಿಸಿದೆ. ಭಕ್ತರ ಪ್ರೀತಿ ಪಾತ್ರವಾಗಿದ್ದ ಈ ಮೊಸಳೆ ಬಗ್ಗೆ ನಾನಾ ಕಥೆಗಳು ಹಬ್ಬಿದ್ದವು. ಇದೀಗ ಈ ಕಥೆಗಳ ಹಿಂದಿನ ಸತ್ಯ ಕೂಡ ತೆರೆದುಕೊಂಡಿದೆ.

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ


ಹೌದು..! ಪ್ರಾಕೃತಿಕವಾಗಿ ಮೊಸಳೆಗಳು ಮಾಂಸಾಹಾರಿಗಳಾಗಿವೆ. ಆದರೆ, ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ರಕ್ಷಕನಂತಿರುವ ಬಬಿಯಾ ಎಂಬ ಮೊಸಳೆ ಮಾತ್ರ ದೇವರ ಪ್ರಸಾದವನ್ನು ತಿಂದು ಬದುಕುತ್ತದೆ. ಇದು ಯಾವುದೇ ಮಾಂಸಾಹಾರವನ್ನು ತಿನ್ನುವುದಿಲ್ಲ ಎನ್ನುವ ಕಥೆ ಇಲ್ಲಿ ಪ್ರಸಿದ್ಧಿಹೊಂದಿದೆ.

babia

ಮೃತಪಟ್ಟ ಬಬಿಯಾಳ ಅಂತಿಮ ದರ್ಶನ ಪಡೆದ ಭಕ್ತರು


ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷಗಳ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರ. ಈ ಕೆರೆಗೆ ಭಕ್ತರೂ ಇಳಿಯುತ್ತಿದ್ದರು. ಆದರೆ ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.

babia

ಕೋಳಿ ತಿನ್ನುತ್ತಿರುವ ಬಬಿಯಾ


“ದೇವರ ಮೊಸಳೆ” ಎಂದೇ ಕರೆಯಲ್ಪಡುತ್ತಿದ್ದ ಬಬಿಯಾ ಜೀವಂತವಿದ್ದಾಗಲೇ ಅದರ ಬಗ್ಗೆ ಹಲವಾರು ದಂತಕಥೆಗಳಿದ್ದವು ಆದರೆ, ಬಬಿಯಾ ಸಸ್ಯಹಾರಿ ಅನ್ನೋದು ಸುಳ್ಳು ಅಂತ ಕಿಶಾನ್ ಕುಮಾರ್ ಹೆಗಡೆ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅವರು ತಿಳಿಸಿರುವಂತೆ, ಬಬಿಯಾ ಜೀವಂತವಿದ್ದಾಗಲೇ ಅದರ ಬಗ್ಗೆ ಹಲವಾರು ದಂತಕಥೆಗಳಿದ್ದವು.. ಅದರಲ್ಲಿ ಬಹಳಷ್ಟು ಸತ್ಯವೂ ಕೂಡ.. ಆದರೆ ಅದು ಶುದ್ಧ ಸಸ್ಯಾಹಾರಿ ಎನ್ನುವ ವಿಚಿತ್ರ ಸುದ್ದಿ ಮಾತ್ರ ಶುದ್ದಸುಳ್ಳು ಎಂದು ಅವರು ಹೇಳಿದ್ದಾರೆ.

ಬಬಿಯಾಗೆ ವ್ಯಕ್ತಿಯೊಬ್ಬರು ಕೋಳಿ ಕೊಡುತ್ತಿರುವ ಹಳೆಯ ಚಿತ್ರ


ಹಿಂದೆ ಭಕ್ತರ ವತಿಯಿಂದ ಬಬಿಯಾನಿಗೆ ಕೋಳಿಗಳನ್ನು ಅರ್ಪಿಸಲಾಗುತ್ತಿತ್ತು. ಅದನ್ನು ಶಾಖಾಹಾರಿಯಾಗಿ ಪರಿವರ್ತಿಸುವ ಹೆಣಗಾಟಗಳ ನಡುವೆ ಅದು ಸರೋವರಕ್ಕೆ ಬರುತ್ತಿದ್ದ ಚಿಕ್ಕ ಪುಟ್ಟ ಹಕ್ಕಿಗಳನ್ನು ಹಿಡಿಯುತ್ತಿದ್ದದ್ದನ್ನೂ ಕಂಡವರು ಧಾರಾಳ ಮಂದಿ ಇದ್ದಾರೆ. ಮಾಂಸಾಹಾರಿಯಾದೊಡನೆ ಅದರ ದಿವ್ಯತೆಯೋ ಭವ್ಯತೆಯೋ ಕಡಿಮೆಯಾಗಲಾರದು. ಮಾಂಸಾಹಾರಿಯಾಗಿಯೂ ಅದು ಅನಂತಪುರ ಕ್ಷೇತ್ರದ ಹೆಮ್ಮೆಯೂ ಹೌದು. ಹೆಗ್ಗುರುತೂ ಹೌದು. ಅದನ್ನು ಮರೆಮಾಚಿ ನೈಜತೆಯನ್ನು ಬಚ್ಚಿಟ್ಟು ರೋಚಕವಾಗಿಸುವುದರಲ್ಲಿ ಅರ್ಥವಿಲ್ಲ. ಅದೂ ಒಂದು ರೀತಿಯ ವೈದಿಕಶಾಹಿ ಮಾನಸಿಕತೆಯ ಉದಾಹರಣೆಯಷ್ಟೇ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version