1:36 AM Saturday 31 - January 2026

ಬಾಡಿಗೆ ಕೇಳಲು ಬಂದ ಮಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಘೋರ ಕೃತ್ಯ!

05/02/2021

ಬೆಂಗಳೂರು: ಬಾಡಿಗೆ ವಿಚಾರದಲ್ಲಿ ಜಗಳ ನಡೆದು ನಿವೃತ್ತ ಉಪತಹಶೀಲ್ದಾರ್ ಅವರನ್ನು ಹತ್ಯೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಜೇಶ್ವರಿ(60) ಹತ್ಯೆಗೀಡಾಗಿರುವ ಮಹಿಳೆಯಾಗಿದ್ದಾರೆ.  ಪಾರ್ವತಿಪುರದಲ್ಲಿ ಇವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ನೀಡಿದ್ದರು. ನಾಲ್ಕೈದು ತಿಂಗಳಿನಿಂದ ಬಾಡಿಗೆದಾರ ಬಾಡಿಗೆ ನೀಡದ ಕಾರಣ ಮನೆ ಬಳಿ ಹೋಗಿ ರಾಜೇಶ್ವರಿ ಬಾಡಿಗೆ ಹಣ ನೀಡುವಂತೆ ಕೇಳಿದ್ದು, ಈ ವೇಳೆ ವಾಗ್ವಾದ ನಡೆದಿದ್ದು, ಬಾಡಿಗೆದಾರ ರಾಜೇಶ್ವರಿ ಅವರನ್ನು ಮನೆಯ ಒಳಗೆ ಎಳೆದೊಯ್ದು ಕತ್ತುಕೊಯ್ದು ಹತ್ಯೆ ಮಾಡಿದ್ದಾನೆ.

ಹತ್ಯೆಯ ಬಳಿಕ ಮೃತದೇಹವನ್ನು ಬಿಡದಿ ಬಳಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು, ಅವರ ಮೊಬೈಲ್ ನ್ನು ಎಸೆದಿದ್ದಾರೆ. ರಾಜೇಶ್ವರಿ ಅವರ ನಾಪತ್ತೆಯ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಅಸಲಿ ವಿಚಾರ ತಿಳಿದು ಬಂದಿದ್ದು,  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version