ಬಜಪೆ: ಅನ್ಸರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐಎಎಸ್ ತರಬೇತಿ ಪುಸ್ತಕ ಬಿಡುಗಡೆ

ansar english medium school
08/08/2025

ಬಜಪೆ: ಆನ್ಸರ್ ಆಂಗ್ಲ ಮಾಧ್ಯಮ ಶಾಲೆ(Ansar English Medium School)ಯಲ್ಲಿ ಐಎಎಸ್ ತರಬೇತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಜಪೆ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್. ಭಾಗವಹಿಸಿ ಮಾತನಾಡಿ, ಪ್ರೌಢಶಾಲೆಯ ಈ ಸರಿಯಾದ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಭಾರತದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಗಳಾದ  ಐಎಎಸ್/ ಐಪಿಎಸ್ ನ ತರಬೇತಿ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅನ್ಸರ್ ಶಿಕ್ಷಣ ಸಂಸ್ಥೆ ವ್ಯವಸ್ಥೆಗೊಳಿಸಿರುವುದು ಮಹತ್ವದ ಹೆಜ್ಜೆ. ಐಎಎಸ್ ಪರೀಕ್ಷೆಯ ಮಹತ್ವವನ್ನು ತಿಳಿದುಕೊಂಡು ಪರೀಕ್ಷೆಯನ್ನು ಪಾಸು ಮಾಡಿದ್ದಲ್ಲಿ ಜಿಲ್ಲಾಧಿಕಾರಿಯಾಗಿ, ಇಲಾಖೆಗಳ ಮುಖ್ಯಸ್ಥರಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಬಹುದು.

ಮಂಗಳೂರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡದಿರುವುದು ವಿಪರ್ಯಾಸ ಎಂದು ಎಂದರು. ಇದೇ ಸಂದರ್ಭದಲ್ಲಿ ಮಾದಕ ವಸ್ತು ಮತ್ತಿತರ ರಾಸಾಯನಿಕ ಪದಾರ್ಥಗಳ ಮಾರಾಟ, ಸಾಗಾಟ, ಬಳಕೆ, ಸಂಗ್ರಹ ಇತ್ಯಾದಿಗಳ ಬಗ್ಗೆ ಕಾನೂನು ಉಲ್ಲಂಘಿಸಿದಲ್ಲಿ ಆನುಭವಿಸಬೇಕಾದ ಕಠಿಣ ಶಿಕ್ಷೆಗಳ ಬಗ್ಗೆ ಮತ್ತು ಅಪ್ರಾಪ್ತ ವಿದ್ಯಾರ್ಥಿಗಳ ವಾಹನ ಚಲಾವಣೆಯಿಂದ ಆಗುವ ಅನಾಹುತಗಳು ಮತ್ತು   ಶಿಕ್ಷೆಯ ಬಗ್ಗೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಜಾಗೃತಿಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ  BAMA ದಮಾಮ್ ಇದರ ಉಪಾಧ್ಯಕ್ಷರಾದ ಇಬ್ರಾಹಿಂ ಕಲೀಲ್, ಸಂಸ್ಥೆಯ ಟ್ರಸ್ಟಿ  ಹನೀಫ್,  ಮುಖ್ಯೋಪಾಧ್ಯಾಯನಿಯವರಾದ ಜಯಶ್ರೀ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸೈದಾ ಅಸ್ಸಾದಿ ಇವರುಗಳು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version