2:28 PM Thursday 16 - October 2025

ರಾತ್ರಿ ವೇಳೆ ಬಾಲಕಿ ಕರೆದಳೆಂದು ಮನೆಗೆ ಹೋದ ಯುವಕ | ಬಳಿಕ ನಡೆದ್ದೇನು ಗೊತ್ತಾ?

phone call
28/03/2021

ಮೀರತ್: ತನ್ನ ಗೆಳತಿ(ಬಾಲಕಿ) ಕರೆ ಮಾಡಿ ಮನೆಗೆ ಬರಲು ಹೇಳಿದಳು ಎಂದು 19 ವರ್ಷ ವಯಸ್ಸಿನ ವಿದ್ಯಾರ್ಥಿಯೋರ್ವ ಆಕೆಯ ಮನೆಗೆ ಹೋಗಿದ್ದು, ಈ ವೇಳೆ ಬಾಲಕಿಯ ಕುಟುಂಬಸ್ಥರು ಬಾಲಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಮೀರಜ್ ಜಿಲ್ಲೆಯ ಮಾವಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಆಟೋರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಂತಿಮ ವರ್ಷದ ಬಿಎ ಓದುತ್ತಿದ್ದ ಅಭಿಷೇಕ್ ಗುರ್ಜರ್ ಹತ್ಯೆಗೀಡಾದ ಯುವಕನಾಗಿದ್ದಾನೆ.  ತನ್ನ ಗ್ರಾಮದ ಬಾಲಕಿಯ ಜೊತೆಗೆ ಅಭಿಷೇಕ್ ಗೆ ಪರಿಚಯವಾಗಿತ್ತು.  ಆಕೆಯ ಜೊತೆಗೆ ಮಾತನಾಡುವುದನ್ನು ಮನೆಯವರು ಹಲವು ಬಾರಿ ನೋಡಿ, ಆತನಿಗೆ ವಾರ್ನಿಂಗ್ ನೀಡಿದ್ದರು.

ಬಾಲಕಿಯ ಮನೆಯವರು ನೀಡಿದ ಎಚ್ಚರಿಕೆಯನ್ನು ಅಭಿಷೇಕ್ ನಿರ್ಲಕ್ಷಿಸಿದ್ದ. ಇದೇ ಸಂದರ್ಭದಲ್ಲಿ ಬಾಲಕಿಯ ಮನೆಯವರು ಆಕೆಯ ಮೊಬೈಲ್ ನ್ನು ಪರಿಶೀಲಿಸಿದ್ದು, ಮೊಬೈಲ್ ನಲ್ಲಿ ಅಭಿಷೇಕ್ 12 ಬಾರಿ ಬಾಲಕಿಗೆ ಕರೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಕಿಯ ಮನೆಯವರ ತಲೆಯಲ್ಲಿ ಕೆಟ್ಟ ಯೋಚನೆ ಬಂದಿದ್ದು, ಬಾಲಕಿಯ ಬಳಿಯಲ್ಲಿಯೇ ಕರೆ ಮಾಡಿ ಅಭಿಷೇಕ್ ನನ್ನು ಮನೆಗೆ ಬರಲು ಹೇಳಿದ್ದಾರೆ. ಬಾಲಕಿ ಕರೆದ ತಕ್ಷಣ ಓಡಿ ಬಂದಿದ್ದ ಅಭಿಷೇಕ್ ನನ್ನು ಕ್ರೂರವಾಗಿ ಥಳಿಸಿ ಹತ್ಯೆ ಮಾಡಿದ್ದು, ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಕೆರೆಯೊಂದಕ್ಕೆ ಎಸೆದಿದ್ದಾರೆ.

ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆ ಅನುಜ್, ಅಜ್ಜ ಮಹಿಪಾಲ, ಚಿಕ್ಕಪ್ಪ ಓಂಕಾರ ಮತ್ತು ಸೋದರಸಂಬಂಧಿ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೀರತ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಕೇಶವ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಲಕಿಯ ಕುಟುಂಬದವರು ಯುವಕನಿಗೆ ಹಲವಾರು ಬಾರಿ ಬೆದರಿಕೆ ಹಾಕಿದ್ದಾಗಿ ಅಭಿಷೇಕ್ ತಂದೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಆಕೆಯ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿದ ರೈತರು | ಕಾರಣ ಏನು ಗೊತ್ತಾ?

ಇತ್ತೀಚಿನ ಸುದ್ದಿ

Exit mobile version