4:52 PM Tuesday 16 - December 2025

ಬಾಲಕಿಗೆ ಮದ್ಯ ಕುಡಿಸಿ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ

09/03/2021

ರಾಜಸ್ತಾನ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ 7 ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದ ಕೋಟಾದಲ್ಲಿನ ರಾಮಗಂಜ್ಮಂಡಿ ಉಪವಿಭಾಗದ ಸುಕೇಟ್​ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಸಂತ್ರಸ್ತ ಬಾಲಕಿ 15 ವರ್ಷದವಳಾಗಿದ್ದು, ಮಹಿಳೆಯೋರ್ವಳು ಬಾಲಕಿಯನ್ನು ಫೆ.25ರಂದು ಅಪ್ರಾಪ್ತ ವಯಸ್ಕಳನ್ನು ಕರೆದುಕೊಂಡು ಇಲಾವಾಡ್ ಗೆ ಹೋಗಿದ್ದು, ಅಲ್ಲಿ  ಮಾದಕ ವಸ್ತುಗಳನ್ನು ನೀಡಿ, ಐದು ದಿನಗಳ ಕಾಲ ಬಾಲಕಿಯನ್ನು ಅತ್ಯಾಚಾರ ನಡೆಸಲಾಗಿದೆ.

ಅತ್ಯಾಚಾರದ ಬಳಿಕ ಸುಕೇಟ್ ಗೆ ಬಿಟ್ಟು ಹೋಗಿದ್ದಾರೆ. ಇನ್ನೂ ಮಾರ್ಚ್​ 6ರಂದು ಅಪ್ರಾಪ್ತೆ ಕುಟುಂಬಸ್ಥರು  ಈ ಬಗ್ಗೆ ದೂರು ನೀಡಿದ್ದಾರೆ ಎಂದು  ಸುಕೇಟ್​ ಪೊಲೀಸ್ ಠಾಣೆ ಅಧಿಕಾರಿ ನಾರಾಯಣ್ ಸಿಂಗ್ ತಿಳಿಸಿದ್ದಾರೆ. ಇದೇ ವೇಳೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಕೂಡ ದೂರಿದ್ದಾರೆ.

ಇತ್ತೀಚಿನ ಸುದ್ದಿ

Exit mobile version