9:07 AM Wednesday 22 - October 2025

ಬಾರ್ ನಲ್ಲಿ ಗಲಾಟೆ | 55 ವರ್ಷದದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ಆಟೋ ಚಾಲಕ

08/02/2021

ತಿರುವನಂತಪುರಂ: ಕೇರಳದ ಬಾರ್ ವೊಂದರಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಬಾರ್ ನಲ್ಲಿ ಗಲಾಟೆ ನಡೆದ ವೇಳೆ 28 ವರ್ಷದ ಯುವಕನೋರ್ವ 55 ವರ್ಷದ ವ್ಯಕ್ತಿ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆ ನಡೆದಿದೆ.

28 ವರ್ಷದ ಶರೀಫ್ ಕೃತ್ಯ ನಡೆಸಿದ ಆರೋಪಿಯಾಗಿದ್ದು, 55 ವರ್ಷದ ಸುಲೇಮಾನ್ ಸಂತ್ರಸ್ತ ವ್ಯಕ್ತಿಯಾಗಿದ್ದಾನೆ. ಬಾರ್ ಗೆ ಆಗಮಿಸುತ್ತಿದ್ದ ವೇಳೆ  ಶರೀಫ್ ನ ಆಟೋ  ಸುಲೇಮಾನ್ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಆದರೆ, ಇದಾದ ಬಳಿಕ  ಬಾರ್ ನಲ್ಲಿ ಇವರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಮತ್ತೆ ಗಲಾಟೆ ನಡೆದಿದೆ.

ಗಲಾಟೆಯ ವೇಳೆ ಶರೀಫ್  ಸುಲೇಮಾನ್ ಗೆ ಥಳಿಸಿದ್ದು, ಆತನನ್ನು ನೆಲಕ್ಕೆ ಕೆಡವಿ ಮರ್ಮಾಂಗಕ್ಕೆ ಕಚ್ಚಿ ಕತ್ತರಿಸಿದ್ದಾನೆ.  ಬಾರ್ ಸಿಬ್ಬಂದಿ ಶರೀಫ್ ನನ್ನು ತಡೆಯಲು ಯತ್ನಿಸಿದರೂ ಆತ ಸುಮ್ಮನಾಗಿರಲಿಲ್ಲ. ತಕ್ಷಣವೇ ಸುಲೇಮಾನ್ ನನ್ನು ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಂಡಾದ ಮರ್ಮಾಂಗವನ್ನು ಜೋಡಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಶರೀಫ್ ಪೆರಂಬಾದಪ್ಪು ನಿವಾಸಿಯಾಗಿದ್ದಾನೆ. ಸುಲೇಮಾನ್ ರಿಹಾಇಶ್ ಪುನ್ನುಕಾವುನಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಬಾರ್ ಸಿಬ್ಬಂದಿಯ ನೆರವಿನ ಮೂಲಕ ಆರೋಪೊ ಶರೀಫ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version