ಎಗ್‌ ರೈಸ್‌ ಹೊಟೇಲ್‌ ನ ಅಡುಗೆ ಸಿಬ್ಬಂದಿಯಾಗಿದ್ದ ಯುವಕನ ಬರ್ಬರ ಹತ್ಯೆ!

phakiresh
07/02/2024

ಧಾರವಾಡ: ಎಗ್​​ ರೈಸ್​ ಹೋಟೆಲ್ ​ವೊಂದರಲ್ಲಿ  ಅಡುಗೆ ಸಿಬ್ಬಂದಿಯಾಗಿದ್ದ ವ್ಯಕ್ತಿಯೋರ್ವನನ್ನು ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಫಕಿರೇಶ್ ಪ್ಯಾಟಿ ಹತ್ಯೆಯಾದ ಯುವಕನಾಗಿದ್ದಾನೆ. ಕೊಲೆ ಮಾಡಿರುವ ಆರೋಪಿ ದಾಂಡೇಲಿ ಮೂಲದ ಕನ್ಯಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರೂ ನಗರದಲ್ಲಿರುವ ವಿಮಲ್ ಎಗ್ ರೈಸ್ ಹೋಟೆಲ್ ​​​​ನಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಯಾದ ಯುವಕ ಕುಕ್ ಆಗಿದ್ದನು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಲಾಟೆ ವಿಕೋಪಕ್ಕೆ ತಿರುಗಿ ಆರೋಪಿ ಕನ್ಯಯ್ಯ, ಫಕಿರೇಶ್ ಪ್ಯಾಟಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು,  ಹಲ್ಲೆಯಿಂದಾಗಿ ತಲೆಗೆ ತೀವ್ರವಾಗಿ ಗಾಯಗಳಾಗಿದ್ದು, ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಫಕಿರೇಶ್ ಪ್ಯಾಟಿ ಸಾವನ್ನಪ್ಪಿದ್ದಾನೆ.

ಸದ್ಯ ಈ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version