ಕೋರೆಗಾಂವ್ ಕದನ ದಲಿತ ಲೋಕದ ವೀರರ ಹಬ್ಬ: ಜಯನ್ ಮಲ್ಪೆ
ಉಡುಪಿ:ಭಾರತದ ಇತಿಹಾಸವು ವರ್ಗ ಮತ್ತು ಜಾತಿ ಸಂಘರ್ಷಗಳಿಂದ ತುಳುಕಿದೆ.ಈ ಹಿನ್ನಲೆಯಲ್ಲಿ ಭೀಮಾನದಿ ತೀರದಲ್ಲಿ ನಡೆದ ಕೋರೆಗಾಂವು ಯುದ್ಧ ದಲಿತ ಲೋಕದ ವೀರರ ಹಬ್ಬ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
206ಅವರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯ ಅಂಬೇಡ್ಕರ್ ಪ್ರತಿಮೆಯ ಮುಂದೆ ಅಂಬೇಡ್ಕರ್ ಯುಸೇನೆ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ ಭೀಮಾ ಕೋರೆಗಾಂವ್ ನೇ ಶೌರ್ಯ ದಿನದ ವಿಜಯೋತ್ಸವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೋರೆಗಾಂವ್ ಯುದ್ಧದ ಪೂರ್ತಿ ಸತ್ಯವನ್ನು ನಮ್ಮ ಇತಿಹಾಸದ ಪಠ್ಯಗಳು ಎಲ್ಲೂ ಹೇಳಲಾರವು.ಕಾರಣ ಇದು ಭಾರತದ ಮನುವಾದಿಗಳ ನಿಜ ಬಣ್ಣವನ್ನು ತಿಳಿಸುತ್ತದೆ.ಪ್ರಸ್ತುತ ದೇಶದಲ್ಲಿ ನಡೆಯುವ ಹಿಂದುತ್ವದ ಲೂಟಿಕೋರರಿಂದ ಸೃಷ್ಟಿಯಾಗಿರುವ ಈ ಹೊಸ ಪೇಶ್ವೆಗಳ ವಿರುದ್ಧ ದಲಿತ ಯುವಜನಾಂಗ ಕೋರೆಗಾಂವ್ ಮಾದರಿಯಲ್ಲಿ ಹೋರಾಡಲೇ ಬೇಕಾಗಿದೆ ಎಂದರು.
ಅಂಬೇಡ್ಕರ್ ಯುವಸೇನೆಯ ಕಾಪು ಅಧ್ಯಕ್ಷ ಲೋಕೇಶ್ ಪಡುಬಿದ್ರಿ ಮಾತನಾಡಿ ಕೋರೆಗಾಂವ್ ಯುದ್ಧದ ಗೆಲುವು ಇತಿಹಾಸದಲ್ಲಿ ಬ್ರಾಹ್ಮಣಶಾಹಿಗಳು ದಲಿತರನ್ನು ನಡೆಸಿಕೊಂಡ ರೀತಿಗೆ ಸರಿಯಾದ ಉತ್ತರವಾಗಿರುತ್ತದೆ.ಅದಲ್ಲದೆ ಭಾರತೀಯರನ್ನು ಹಾಳು ಮಾಡಿರುವುದು ನಮ್ಮ ದೇಶದ ಜಾತಿವ್ಯವಸ್ಥೆ,ಅಸ್ಪಶ್ಯತೆ,ಶೋಷಣೆಯನ್ನು ಪೋಷಿಸುತ್ತಿರುವ ಮೂಲಗಳಾಗಿವೆ ಎಂಬುದನ್ನು ಧೃಡಪಡಿಸುತ್ತದೆ ಎಂದರು.
ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ ಅಂಬೇಡ್ಕರ್ ಕೋರೆಗಾಂವ್ನಲ್ಲೊಂದು ಸಮಾವೇಶ ಮಾಡಿಸಿ ದಲಿತರ ಸ್ವಾಭಿಮಾನ ಸೂಚಿಸುವ,ಅದರ ಕೆಚ್ಚೆದೆಯನ್ನು ತಿಳಿಸುವ ಯುದ್ಧವನ್ನು ನಮಗೆಲ್ಲ ಪರಿಚಯಿಸದೇ ಇದ್ದಿದ್ದರೆ ಇಂದು ನಮಗೆ ಇತಿಹಾಸದಲ್ಲಿನ ಒಂದು ದಿಗ್ವಿಜಯವನ್ನೇ ಮರೆತಂತಾಗುತ್ತಿತ್ತು ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಾಕ್ಷ ಹರೀಶ್ ಸಲ್ಯಾನ್ ಮಾತನಾಡಿ ಈ ದೇಶದಲ್ಲಿ ಬ್ರಾಹ್ಮಣರು ತಲೆತಲಾಂತರದಿಂದ ಅಕ್ಷರವನ್ನು ಸಂಸ್ಕೃತ ಭಾಷೆಯಲ್ಲಿ ತಮಗೆ ಮಾತ್ರ ತಿಳಿಯುವಂತೆ ರಚಿಸಿಕೊಂಡು ಇತರರಿಗೆ ವೇದವನ್ನು ಓದಬಾರದು,ಕೇಳಬಾರದು,ಮನನ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿ ಅದನ್ನು ಮೀರಿದರೆ ಕೊಲ್ಲುತ್ತ ಸಾಗಿದ್ದ ಇವರು ನಮ್ಮ ದೇಶದ ಇತಿಹಾಸವನ್ನು ಸಹ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೃಷ್ಣ ಬಂಗೇರ ಪಡುಬಿದ್ರಿ,ಸಂತೋಷ್ ಕಪ್ಪೆಟ್ಟು,ದಯಾಕರ್ ಮಲ್ಪೆ,ಮಾಧವ ಕರ್ಕೆರ ಪಾಳೆಕಟ್ಟೆ,ಸಾಧು ಚಿಟ್ಪಾಡಿ, ಕೃಷ್ಣ ಶ್ರೀಯಾನ್ ಮಲ್ಪೆ,ರವಿರಾಜ್ ಲಕ್ಷ್ಮೀನಗರ,ನವೀನ್ ಬನ್ನಂಜೆ,ವಿಶು ಪಾಳೆಕಟ್ಟೆ,ಪ್ರಸಾದ್ ಮಲ್ಪೆ,ವಿನಯ ಕೊಡಂಕೂರು,ವಸಂತ ಪಾದೆಬೆಟ್ಟು, ನಿಶಾನ್ ಲಕ್ಷ್ಮೀನಗರ,ರಿತೇಶ್ ಕೆಮ್ಮಣ್ಣು,ಕೌಶಿಕ್ ಪಡುಕುದ್ರು,ನವೀನ್ ಕುಂಜ್ಜಿಬೆಟ್ಟು,ಸುರೇಶ್ ಚಿಟ್ಪಾಡಿ,ಸುಕೇಶ್ ಪುತ್ತೂರು,ಸುರೇಶ್ ಎಂ.ನೆರ್ಗಿ, ವಸಂತ ಅಂಬಲಪಾಡಿ, ಅರುಣ್ ಸಾಲ್ಯಾನ್ ನೆರ್ಗಿ,ನಾಗೇಶ್ ಮಲ್ಪೆ, ದೀಪಕ್ ಕೊಡವೂರು,ಅಶೋಕ್ ಪತ್ತೂರು,ಪ್ರಶಾಂತ್ ಕಾಂಚನ್ ನೆರ್ಗಿ, ಶ್ರೀನಾಥ್ ಚಿಟ್ಪಾಡಿ,ವಿಜಯ್ ನಿಟ್ಟೂರು,ಭಗವಾನ್ ಮಲ್ಪೆ,ರತನ್ ನೆರ್ಗಿ, ರವಿರಾಜ್ ಕೊಡಂಕೂರು, ಹರೀಶ್ನೆರ್ಗಿ ಮುಂತಾದವರು ಭಾಗವಹಿಸಿದ್ದರು.

























