4:10 PM Saturday 18 - October 2025

ಪಠ್ಯಪುಸ್ತಕ ಪರಿಷ್ಕರಣೆ ಯಡವಟ್ಟು: ಶಿಕ್ಷಣ ಸಚಿವರಿಗೆ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದೇನು?

nagesh mahesh
07/06/2022

ಬೆಂಗಳೂರು:  ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ದೋಷಗಳ ಬಗ್ಗೆ ಪರಿಷ್ಕರಣ ಸಮಿತಿಯ ರೋಹಿತ್ ಚಕ್ರತೀರ್ಥ ಅವರಿಗೆ ಮನವರಿಕೆ ಮಾಡಿ, ಆ ದೋಷಗಳನ್ನು ಸರಿಪಡಿಸುವಂತೆ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರಿಗೆ  ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮನವಿ ಮಾಡಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಾದ ನಡೆಯುತ್ತಿರುವುದರ ನಡುವೆ ಎನ್.ಮಹೇಶ್ ಅವರು, ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ, ಪಠ್ಯಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಹಾಗೂ ಬುದ್ಧ, ರಾಷ್ಟ್ರಕವಿ ಕುವೆಂಪು ಅವರ ಬರೆದಿರುವ ನಾಡಗೀತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಡೆಸಿರುವ ಯಡವಟ್ಟಿನ ವಿಚಾರವಾಗಿ ಸಚಿವರ ಜೊತೆಗೆ ಚರ್ಚೆ ನಡೆಸಿದರು.

ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಿ.ಸಿ,ನಾಗೇಶ್,  ಸಂವಿಧಾನ ಶಿಲ್ಪಿ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲ, ಸರಿಪಡಿಸಿದ ಮುದ್ರಿಸಿ ಹಂಚುತ್ತೇವೆಎಂದು ಭರವಸೆ ನೀಡಿದ್ದಾರೆ.

ಅಂತೆಯೇ ಗೌತಮ ಬುದ್ಧ ಮತ್ತು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಸಂಬಂಧಿಸಿದ ವಿವಾದವನ್ನೂ ಸಕಾರಾತ್ಮಕ ಅಂತ್ಯ ಕಾಣಿಸುವ ಬಗ್ಗೆ ಭರವಸೆ ನೀಡಿದ್ದಾರೆ.

‘ಸಂವಿಧಾನ ಶಿಲ್ಪಿ’ ಮತ್ತು ‘ಬೌದ್ಧರುದ್ಯಾನ’ ಪದ ಮರು ಸೇರ್ಪಡೆ ಮಾಡಬೇಕು ಎಂದು ಎನ್ ಮಹೇಶ್ ಮನವಿ ಮಾಡಿದ್ದು, ಶಿಕ್ಷಣ ಸಚಿವರ ಒಪ್ಪಿಗೆ ಸೂಚಿಸಿದ್ದು, ಸರಿಪಡಿಸಿದ ಮುದ್ರಿಸಿ ಹಂಚುತ್ತೇವೆ ಭರವಸೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು ಸೇರಿದಂತೆ ರಾಜ್ಯದ 4 ಮಹಾನಗರಗಳಲ್ಲಿ ಸಂಚಾರಿ ಲ್ಯಾಬ್, ಕ್ಲಿನಿಕ್ ಸೇವೆ

ಪತ್ನಿ ರುಚಿಕರ ಅಡುಗೆ  ಮಾಡಿಕೊಡುವುದಿಲ್ಲ ಎಂದು ಪತಿ ಆತ್ಮಹತ್ಯೆಗೆ ಶರಣು

Y’S Men club of mangaluru: ಸಾಮಾಜಿಕ ಸೇವೆಗಳ ಕಿರುಪರಿಚಯ

ಮೂವರು ಬಾಲಕರ ಮೇಲೆ ಅತ್ಯಾಚಾರ: ಮದ್ರಸ ಶಿಕ್ಷಕ, ಹಿರಿಯ ವಿದ್ಯಾರ್ಥಿ ಅರೆಸ್ಟ್

ಇತ್ತೀಚಿನ ಸುದ್ದಿ

Exit mobile version