10:53 AM Tuesday 21 - October 2025

ಬೆಡ್ ರೂಮ್ ಗೆ ನುಗ್ಗಿದ ಭಯಾನಕ ಕಾಡು ಬೆಕ್ಕು | ಮುಂದೇನಾಯ್ತು ನೋಡಿ

afican cat
07/07/2021

ಅಟ್ಲಾಂಟಿಕಾ: ಮಹಿಳೆಯೊಬ್ಬರು ನಿದ್ದೆಯಿಂದ ಕಣ್ಣು ತೆರೆಯುತ್ತಿದ್ದಂತೆಯೇ ದೊಡ್ಡದಾದ ಬೆಕ್ಕೊಂದು ಅವರ ಮುಖದಿಂದ ಕೇವಲ 6 ಇಂಚು ದೂರದಲ್ಲಿ ಕುಳಿತಿರುವುದು ಕಂಡು ಬಂದಿದ್ದು, ಇದರಿಂದ ಬೆಚ್ಚಿ ಬಿದ್ದ ಅವರು ಇಷ್ಟೊಂದು ದೊಡ್ಡ ಬೆಕ್ಕು ಬರಲು ಹೇಗೆ ಸಾಧ್ಯ ಎಂದು ಕೆಲ ಕಾಲ ಅಚ್ಚರಿ ಪಟ್ಟಿದ್ದಾರೆ. ಬಳಿಕ ಸತ್ಯ ತಿಳಿದಾಗ ನಿಜಕ್ಕೂ ಬೆದರಿ ಹೋಗಿದ್ದಾರೆ.

ಕ್ರಿಸ್ಟೀನ್ ಪ್ರ್ಯಾಂಕ್ ಎಂಬವರು ಬುಧವಾರ ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಳ್ಳುತ್ತಿದ್ದಂತೆಯೇ ಬೆಕ್ಕನ್ನು ಕಂಡು ಶಾಕ್ ಗೊಳಗಾಗಿದ್ದಾರೆ. ಮಹಿಳೆಯ ಪತಿಯು ತಮ್ಮ ಮನೆಯ ನಾಯಿಯನ್ನು ವಿಹಾರಕ್ಕಾಗಿ ಕರೆದುಕೊಂಡಿದ್ದ ಸಂದರ್ಭದಲ್ಲಿ ಬಾಗಿಲು ತೆರೆದಿಟ್ಟಿದ್ದರು. ಈ ವೇಳೆ ಈ ಬೃಹತ್ ಬೆಕ್ಕು ಮನೆಯೊಳಗೆ ಎಂಟ್ರಿ ಕೊಟ್ಟಿದೆ.

ಇದು ಆಫ್ರಿಕಾದ ಬೆಕ್ಕಾಗಿದ್ದು, ಅತೀ ಭಯಾನಕ ಬೆಕ್ಕಾಗಿದೆ. ಮನೆಯೊಳಗೆ ಬಂದದ್ದು, ಬೆಕ್ಕೋ ಅಥವಾ ಚಿರತೆಯೋ ಎನ್ನುವ ಗೊಂದಲಕ್ಕೆ  ಕ್ರಿಸ್ಟೀನ್ ಪ್ರ್ಯಾಂಕ್ ಮೊದಲು ಸಿಲುಕಿಕೊಂಡಿದ್ದರು. ಕೊನೆಗೆ ಬಾತ್ ರೂಮ್ ನ ಬಾಗಿಲನ್ನು ತೆರೆದು ಈ ಕಾಡು ಬೆಕ್ಕನ್ನು ದಂಪತಿ  ಹರಸಾಹಸ ಪಟ್ಟು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version