12:43 AM Wednesday 29 - October 2025

ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹೆಜ್ಜೇನು ದಾಳಿ: ಹಸು ಸಾವು

cow
04/03/2024

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಅರಮನೆ ತಲಗೂರಿನ ಬೆದೆಮಕ್ಕಿ ಗ್ರಾಮದಲ್ಲಿ ಗದ್ದೆಯಲ್ಲಿ  ಮೇಯುತ್ತಿದ್ದ ಹಸುವಿನ ಮೇಲೆ ಹೆಜ್ಜೇನು ದಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.

ಅರಮನೆ ತಲಗೂರಿನ ಕೃಷ್ಣೇಗೌಡ ಅವರ ಹಸುವಿಗೆ ಹೆಜ್ಜೇನು ದಾಳಿ ನಡೆದಿದ್ದು ಕೆಲವೇ ದಿನಗಳಲ್ಲಿ ಅದು ಕರುವನ್ನು ಹಾಕುತ್ತಿತ್ತು ಎಂದು ಹಸುವಿನ ಮಾಲಿಕ ಕೃಷ್ಣೇಗೌಡ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಜಾನುವಾರು ಅಧಿಕಾರಿ ನವೀನ್ ಕುಮಾರ್ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದರೂ ಹಸುವನ್ನು ಉಳಿಸಲು ಸಾಧ್ಯವಾಗಿಲ್ಲ.

ಇತ್ತೀಚಿನ ಸುದ್ದಿ

Exit mobile version