ರಾಮನವಮಿಯಂದು 36 ಜನರ ಸಾವಿಗೆ ಕಾರಣವಾಗಿದ್ದ ಬೆಳೇಶ್ವರ ಮಹಾದೇವ್ ದೇವಸ್ಧಾನ ನೆಲಸಮ!
ಮಧ್ಯಪ್ರದೇಶ: ರಾಮನವಮಿಯಂದು ಇಂದೋರ್ ನಲ್ಲಿರುವ ಬೆಳೇಶ್ವರ ಮಹಾದೇವ್ ದೇವಸ್ಧಾನದ ಮೇಲ್ಚಾವಣಿ ಕುಸಿದು 36 ಮಂದಿ ಪ್ರಾಣಕಳೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿರುವಂತೆ ಅಧಿಕಾರಿಗಳು ಕ್ರಮಕೈಗೊಂಡಿದ್ದು, ದೇವಸ್ಧಾನವನ್ನು ಕೆಡವಿದ್ದಾರೆ.
ಮಹಾನಗರ ಪಾಲಿಕೆಯು ಹಳೆಯ ಹಾಗೂ ಹೊಸದಾಗಿ ನಿರ್ಮಿಸಿದ್ದ ದೇವಸ್ಧಾನವನ್ನು ಕೇಡವಿದ್ದು,ಈ ವೇಳೆ ಯಾವುದೇ ರೀತಿಯ ಅವಘಡ ನಡೆಯದಂತೆ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಗೌಪ್ಯವಾಗಿ ಕ್ರಮ ಕೈಗೊಂಡ ಮಹಾನಗರ ಪಾಲಿಕೆಯು ಬೆಳಗಿನ ಜಾವ ಸುಮಾರು 4 ಗಂಟೆಗೆ ದೇವಸ್ಧಾನ ನೆಲಸಮಗೊಳಿಸಿದ್ದಾರೆ. ಘಟನಾ ಸ್ದಳದಲ್ಲಿ ಉಪ ಮಹಾನಗರಪಾಲಿಕೆಯ ಆಯುಕ್ತರು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಧಿತರಿದ್ದರು.
ರಾವನಮವಿಯಂದು ಹವನ ನಡಯುತ್ತಿದ್ದ ವೇಳೆ ಜನಸಂದಣಿಯ ಭಾರದಿಂದ ಮೆಟ್ಟಿಲುಬಾವಿಯ ಮೇಲ್ಚಾವಣಿ ಕುಸಿದು ಈ ಘಟನೆ ಸಂಭವಿಸಿದೆ. 200 ವರ್ಷ ಹಳೆಯದಾದ ಮೆಟ್ಟಿಲು ಬಾವಿಯನ್ನು ನಾಲ್ಕು ಕಬ್ಬಿಣ್ಣದ ಗರ್ಡರ್‌ಗಳು, ಕಾಂಕ್ರಿಟ್ ನ ತೆಳುವಾದ ಪದರ ಹಾಗೂ ಹೆಂಚುಗಳಿಂದ ಮುಚ್ಚಲಾಗಿತ್ತು
200 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯನ್ನು ನಾಲ್ಕು ಕಬ್ಬಿಣದ ಗರ್ಡರ್ಗಳು, ಕಾಂಕ್ರೀಟ್ನ ತೆಳುವಾದ ಪದರ ಮತ್ತು ಜನಸಮೂಹದ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದ ಹೆಂಚುಗಳಿಂದ ಮುಚ್ಚಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























