ಬೆಳ್ತಂಗಡಿಯಲ್ಲಿ ರಾತ್ರಿ ಪೇ ಸಿಎಂ ಪೋಸ್ಟರ್ ಪತ್ತೆ: ಬೆಳಗ್ಗೆ ಪೋಸ್ಟರ್ ಗಳು ಮಾಯ
ಬೆಳ್ತಂಗಡಿ: ನಗರದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ರಾತ್ರಿ ಪೇ ಸಿ.ಎಂ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆದರೆ ಬೆಳಗ್ಗಿನ ವೇಳೆಗೆ ಈ ಪೋಸ್ಟರ್ ಗಳೆಲ್ಲವೂ ಮಾಯವಾಗಿದೆ.
ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು, ಸಂತೆಕಟ್ಟೆಯವಬಸ್ ನಿಲ್ದಾಣದಲ್ಲಿ, ಚರ್ಚ್ ರೋಡಿನ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಪೋಸ್ಟರ್ ಗಳನ್ನು ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಅದು ಎಲ್ಲೆಡೆ ವೈರಲ್ ಆಗುತ್ತಿದೆ.
ಆದರೆ ಶನಿವಾರ ಬೆಳಗ್ಗಿನ ವೇಳೆಗೆ ನಗರದಲ್ಲಿ ಒಂದೇ ಒಂದು ಪೋಸ್ಟರ್ ಇಲ್ಲದ ರೀತಿಯಲಿ ಎಲ್ಲವನ್ನೂ ತೆರವು ಗೊಳಿಸಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























