4:53 AM Wednesday 22 - October 2025

ಆಟ ಆಡೋಕೇ ಕಂಪ್ಯೂಟರ್ ಬೇಕಿತ್ತಂತೆ: ಸ್ನೇಹಿತನನ್ನೇ ಅಪಹರಿಸಿ ಕೊಂದೇ ಬಿಟ್ರು ಕಿಲ್ಲರ್ ಫ್ರೆಂಡ್ಸ್

28/08/2023

ಅಪ್ರಾಪ್ತ ಗೆಳೆಯರು ತನ್ನ ಸ್ನೇಹಿತನನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಘುರ್ನಿ ಪ್ರದೇಶದಲ್ಲಿ ನಡೆದಿದೆ. 14 ವರ್ಷದ ಬಾಲಕನ್ನು ಕೊಂದಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಈ ಮೂವರು ಬಾಲಕರು ಆಟವಾಡಲು ಕಂಪ್ಯೂಟರ್ ಖರೀದಿಸಲು ಬಯಸಿದ್ದರು‌. ಇದಕ್ಕಾಗಿ ತಮ್ಮ ಸ್ನೇಹಿತನನ್ನೇ ಅಪಹರಿಸಿದ ಬಳಿಕ ಆತನ ತಾಯಿಗೆ ಕರೆ ಮಾಡಿ ಬಳಿಕ ಬಾಲಕನನ್ನು ಕೊಂದಿದ್ದಾರೆ.

8 ನೇ ತರಗತಿಯ ವಿದ್ಯಾರ್ಥಿ ತನ್ನ ಮೂವರು ಸ್ನೇಹಿತರ ಕೈಯಲ್ಲಿ ಹತ್ಯೆಯಾದವ. ಮೃತ ಬಾಲಕ ಘುರ್ನಿ ನಿವಾಸಿಯಾಗಿದ್ದು, ಕೆಲವು ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗೆ ಹೋಗುತ್ತಿದ್ದಾಗ ಕಾಣೆಯಾಗಿದ್ದ. ಬೆಳಗ್ಗೆ ಆತನ ತಾಯಿಗೆ 3 ಲಕ್ಷ ರೂ ನೀಡುವಂತೆ ಕರೆ ಬಂದಿದ್ದು, ಅವರು ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೃಷ್ಣನಗರ ನಗರದ ಹೊರವಲಯದಲ್ಲಿರುವ ಹಿಜುಲಿ ಪ್ರದೇಶದ ಕೊಳದಿಂದ ಗೋಣಿಚೀಲದಲ್ಲಿ ಕಟ್ಟಲಾಗಿದ್ದ ಬಾಲಕನ ಶವವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಮೃತ ಬಾಲಕ ಓದುತ್ತಿದ್ದ ಶಾಲೆಯಲ್ಲೇ 10ನೇ ತರಗತಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕನನ್ನು ಕೊಂದು ಆತನ ದೇಹವನ್ನು ಕೊಳದಲ್ಲಿ ಎಸೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ
ಮೃತರ ತಂದೆ ಬಹಳ ಹಿಂದೆಯೇ ತೀರಿಕೊಂಡಿದ್ದರು, ತಾಯಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ತಾಯಿ-ಮಗ ಇಬ್ಬರೂ ತಮ್ಮ ತಾಯಿಯ ಚಿಕ್ಕಪ್ಪನ ಮನೆಯಲ್ಲಿಯೇ ಇದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version