9:08 AM Saturday 18 - October 2025

ಮಂಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯವಸ್ತ! | ಶಾಲೆಗಳಿಗೆ ರಜೆ ಇದೆಯೇ?

mangalore rain
30/06/2022

ಮಂಗಳೂರು:  ಇಂದು ಮುಂಜಾನೆಯಿಂದ ಮಂಗಳೂರಿನಲ್ಲಿ ಆರಂಭವಾದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು,  ಭಾರೀ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲಾರ್ಟ್ ಘೋಷಿಸಲಾಗಿದೆ.

ಒಂದೆಡೆ ಭಾರೀ ಮಳೆಯಾದರೆ, ನಗರದ ವಿವಿಧೆಡೆಗಳಲ್ಲಿ ಆರಂಭಿಸಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ರಸ್ತೆಯಲ್ಲೇ ನೀರು ನಿಂತು ಪ್ರಯಾಣಿಕರು ಪರದಾಡು ಸ್ಥಿತಿ ನಿರ್ಮಾಣವಾಗಿದೆ.

ಪಂಪ್ ವೆಲ್, ತೊಕ್ಕೊಟ್ಟು, ಕೊಟ್ಟಾರ ಚೌಕಿ ಮೊದಲಾದ ಕಡೆಗಳಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿರುವ ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ.

ಮಳೆ ತೀವ್ರವಾಗಿದ್ದರೂ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಹವಾಮಾನ ಇಲಾಖೆ ವರದಿ ಆಧರಿಸಿ ಜಿಲ್ಲಾಡಳಿತ ವಿದ್ಯಾರ್ಥಿಗಳ ಸುರಕ್ಷತೆಗೆ ಸರಿಯಾದ ಕ್ರಮವನ್ನು ಮುಂಚಿತವಾಗಿ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ರಜೆ:

ಮಹಾನಗರ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಶಾಲೆಗಳಿಗೆ ಬರಲು ಅನಾನುಕೂಲವಾದ ಪ್ರದೇಶದಲ್ಲಿ ಇಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಈಗಾಗಲೇ ಶಾಲೆಗಳಿಗೆ ವಿದ್ಯಾರ್ಥಿಗಳು ಬಂದಿದ್ದಲ್ಲಿ, ಎಂದಿನಂತೆ ಕಾರ್ಯನಿರ್ವಹಿಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರೆ, ಅವರನ್ನು ವಾಪಸ್ ಕಳುಹಿಸುವ, ತರಗತಿ ಮುಚ್ಚುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ನ ಬರ್ಬರ ಹತ್ಯೆ!

ನಟಿ ಪವಿತ್ರ ಲೋಕೇಶ್ 3ನೇ ಮದುವೆಯ ವದಂತಿ: ಕಾನೂನು ಸಮರಕ್ಕೆ ಮುಂದಾದ ನಟಿ

ಇತ್ತೀಚಿನ ಸುದ್ದಿ

Exit mobile version