6:36 PM Thursday 16 - October 2025

ಬಿಗ್ ಬಾಸ್ ಆಟದ ವೇಳೆ ಪುರುಷ ಸ್ಪರ್ಧಿಗಳು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ ಎಂದ ನಟಿ!

12/03/2021

ಕನ್ನಡ ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಸಿರುವ ಪ್ರಖ್ಯಾತ ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಇಬ್ಬರು ತನ್ನ ಮೇಲೆ ಪರಚುತ್ತಿದ್ದಾರೆ. ಬೇಕೆಂತಲೇ ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಗ್ ಬಾಸ್ ಎಂದರೆ, ವಿವಾದ ಇದ್ದದ್ದೇ, ಆದರೆ, ಸದ್ಯ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವ ಶೋಗಳ ಪೈಕಿ ಈ ಶೋ ಕೂಡ ಒಂದಾಗಿದೆ. ಆದರೆ ವಿವಾದಕ್ಕೆ ಇದು ಈಗಲೂ ಹಿಂದಿನಂತೆಯೇ ಕುಖ್ಯಾತಿಯನ್ನು ಪಡೆದಿದೆ.

ಮನುಷ್ಯರ ತಂಡ ಹಾಗೂ ವೈರಸ್ ಗಳ ತಂಡ ಎಂಬ ಟಾಸ್ಕ್ ವೇಳೆ  ಹಾಸ್ಯ ನಟ ಮಂಜು ಹಾಗೂ ಶಮಂತ್ ಉದ್ದೇಶ ಪೂರ್ವಕವಾಗಿ ತನ್ನನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ಇವರ ಕೆಲಸದಿಂದ ನನಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಇಲ್ಲಿಯೇ ನಿಲ್ಲಿಸಿ ಎಂದು ನಿಧಿ ಕಣ್ಣೀರು ಹಾಕಿದ್ದಾರೆ.

ಇನ್ನೂ ಈ ಆರೋಪವನ್ನು ಮಂಜು ನಿರಾಕರಿಸಿದ್ದು, ಜೊತೆಯಾಗಿ ಆಡುವಾಗ ಯಾವುದನ್ನೂ ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ನಿಮ್ಮ ತಂಡದವರು ವೈಲೆಂಟ್ ಆಗಿ ಆಡಿರುವುದರಿಂದ ಆಟದ ದಿಕ್ಕು ಬದಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version