ಬಿಜೆಪಿಗೆ ಟೆನ್ಸನ್ ತಂದ ಆಂತರಿಕ ಸಮೀಕ್ಷೆ; ಉತ್ತರ ಭಾರತದಲ್ಲೂ ಬಿಜೆಪಿಗೆ ಇಲ್ವಂತೆ ಪೂರಕ ವಾತಾವರಣ..!

ಈ ಬಾರಿ 400 ಸೀಟ್ ಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರೂ ಪರಿಸ್ಥಿತಿಯೂ ಆ ರೀತಿ ಇಲ್ಲ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆ ಹೇಳಿದೆ. ಉತ್ತರ ಭಾರತದಲ್ಲಿ ಈ ಬಾರಿ ಬಿಜೆಪಿಗೆ ಪೂರಕ ವಾತಾವರಣ ಇಲ್ಲ ಮತ್ತು ವಿಪಕ್ಷಗಳಿಂದ ತೀವ್ರ ಪ್ರತಿರೋಧ ಎದುರಾಗಲಿದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆ ಹೇಳಿದೆ.
ಹರಿಯಾಣದ 10 ಸೀಟುಗಳ ಪೈಕಿ 5 ಸೀಟ್ ಗಳಲ್ಲೂ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಆಂತರಿಕ ಸಮೀಕ್ಷೆ ಹೇಳಿದೆ. 25 ಸ್ಥಾನಗಳಿರುವ ರಾಜಸ್ಥಾನದಲ್ಲೂ ಬಿಜೆಪಿಗೆ ತಿರುಗೇಟು ಎದುರಾಗಲಿದೆ ಎಂದು ವರದಿಯಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಸೋಲು ತಂದಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಖ್ಯವಾಗಿ ಜಾಟ್ ಸಮುದಾಯ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ತೀವ್ರ ಸಿಟ್ಟಾಗಿದೆ ಎಂದು ವರದಿಯಾಗಿದ್ದು ಇದರ ಲಾಭ ಇಂಡಿಯಾ ಕೂಟಕ್ಕೆ ಸಿಗಲಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth