ಕೊಯಮತ್ತೂರಿಗೆ ಮೀಸಲಾದ ಹೂಡಿಕೆಯನ್ನು ಬಿಜೆಪಿ ಗುಜರಾತ್ ಗೆ ತಿರುಗಿಸಿದೆ: ಎಂ.ಕೆ.ಸ್ಟಾಲಿನ್ ಗಂಭೀರ ಆರೋಪ

13/04/2024

ಕೊಯಮತ್ತೂರಿಗೆ ಮೀಸಲಾಗಿದ್ದ ವ್ಯವಹಾರ ಹೂಡಿಕೆಯನ್ನು ಗುಜರಾತ್ ಗೆ ತಿರುಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.

ಕೊಯಮತ್ತೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಮುಖ್ಯಸ್ಥರು, ದೊಡ್ಡ ಕಂಪನಿಯೊಂದು ನಗರದಲ್ಲಿ 6,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಬೇಕಾಗಿತ್ತು. ಆದರೆ ಹೂಡಿಕೆಯನ್ನು ಗುಜರಾತ್ ಗೆ ಸ್ಥಳಾಂತರಿಸುವ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ಈ ಹಂತದಿಂದಲೇ ನಾನು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡುತ್ತಿದ್ದೇನೆ. ತಮಿಳುನಾಡು ಮೂಲದ ದೊಡ್ಡ ಕಂಪನಿಯೊಂದು ಕೊಯಮತ್ತೂರಿನಲ್ಲಿ 6,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಸಿದ್ಧವಾಗಿತ್ತು. ರಾಜ್ಯ ಸರ್ಕಾರವು ಈ ಬಗ್ಗೆ ಮಾತುಕತೆಯನ್ನು ಸಹ ಮುಕ್ತಾಯಗೊಳಿಸಿತ್ತು. ಆದಾಗ್ಯೂ, ಅವರಿಗೆ (ಕಂಪನಿ ಮಾಲೀಕರಿಗೆ) ಬೆದರಿಕೆ ಹಾಕಲಾಯಿತು ಮತ್ತು ಹೂಡಿಕೆಯನ್ನು ಗುಜರಾತ್ ಗೆ ಸ್ಥಳಾಂತರಿಸಲಾಯಿತು. ಇದು ಕೊಯಮತ್ತೂರಿನ ಬಗ್ಗೆ ಬಿಜೆಪಿಯ ನಕಲಿ ಪ್ರೀತಿ” ಎಂದು ಸ್ಟಾಲಿನ್ ಹೇಳಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version