8:19 AM Wednesday 15 - October 2025

ಬಿಜೆಪಿ ಹೈಕಮಾಂಡ್ ಅಂಗಳ  ಸೇರಿತೇ “ಯಾರಿಗೂ ಹೇಳ್ಬೇಡಿ!” ಆಡಿಯೋ ?

naleen kumar
19/07/2021

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದೆ. “ಯಾರಿಗೂ ಹೇಳ್ಬೇಡಿ” ಎಂದು ಹೇಳಿದ್ದ ಆ ಆಡಿಯೋ ಇದೀಗ ಬಿಜೆಪಿ ಹೈಕಮಾಂಡ್ ಕೈ ಸೇರಿದೆ ಎಂದು ಹೇಳಲಾಗಿದೆ.

ನಾಯಕತ್ವ ಬದಲಾವಣೆ ನಡೆಸಲು ಹೈಕಮಾಂಡ್ ಯೋಜನೆ ರೂಪಿಸಲು ಹರಸಾಹಸ ಪಟ್ಟಿದ್ದು, ಇನ್ನೇನು ನಾಯಕತ್ವ ಬದಲಾವಣೆ ಮಾಡಬೇಕು ಅನ್ನೋವಷ್ಟರಲ್ಲಿ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ಬಿಡುಗಡೆಯಾಗಿದೆ. ಇದು ನನ್ನ ಧ್ವನಿಯಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರೂ, ಅದರಲ್ಲಿ ಮಾತನಾಡಿರುವ ವಿಚಾರಗಳು ಬಿಜೆಪಿ ಹೈಕಮಾಂಡ್  ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರಗಳಾಗಿದ್ದರೆ, ನಳೀನ್ ಕುಮಾರ್ ಕಟೀಲ್ ಸಂಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನೂ ಬಿಜೆಪಿ ರಾಜ್ಯ ಉಸ್ತುವಾರಿ  ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಅವರ ಆಡಿಯೋವನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಯಾರ ಬಳಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರವನ್ನು ಚರ್ಚಿಸಲಾಗಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಒಂದು ವೇಳೆ ಆಡಿಯೋ ನಿಜವಾಗಿದ್ದರೆ, ನಳಿನ್ ಕುಮಾರ್ ಕಟೀಲ್ ಯಾರ ಬಳಿ ಈ ವಿಚಾರ ಹಂಚಿಕೊಂಡಿದ್ದಾರೆ ಎನ್ನುವುದು ಕೂಡ ಬೆಳಕಿಗೆ ಬರಬೇಕಿತ್ತು. ಆದರೆ, ಈ ಆಡಿಯೋವನ್ನು ಸ್ವತಃ ಬಿಜೆಪಿಯವರೇ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವ ವಿಚಾರ ವಾಸ್ತವವಾದ್ದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸುದ್ದಿಗಳು:

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಮ್ಮೇಳನ ಆಯೋಜಿಸಿದ ಬಿಎಸ್ ಪಿ!

ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ?  ಕೊಲೆಯೋ?

ಹಾಸನದಿಂದ ಸ್ಪರ್ಧಿಸಲಿದ್ದಾರಾ ಮಲ್ಲಿಕಾರ್ಜುನ ಖರ್ಗೆ? |  ದೊಡ್ಡ ಗೌಡ್ರ ಕೋಟೆ ಛಿದ್ರವಾಗುತ್ತಾ?

 

ಇತ್ತೀಚಿನ ಸುದ್ದಿ

Exit mobile version