11:09 AM Wednesday 20 - August 2025

ದೆಹಲಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ ಎಂದ ರೈತ ಮುಖಂಡ

29/01/2021

ನವದೆಹಲಿ: ದೆಹಲಿ ಹಿಂಸಾಚಾರ ನಡೆಸಿದವರು ರೈತರಲ್ಲ. ರೈತರ ವೇಷದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ ಎಂದು ಭಾರತೀಯ ರೈತ ಸಂಘದ ವಕ್ತಾರ ರಾಕೇಶ್ ಟಿಕತ್ ಆರೋಪಿಸಿದ್ದಾರೆ.

  ಜನವರಿ 26ರಂದು ಇಬ್ಬರು ಬಿಜೆಪಿ ಶಾಸಕರು ರೈತರೊಂದಿಗೆ 400 ಜನರ ಜೊತೆ ಸೇರಿ ರೈತರ ಪ್ರತಿಭಟನೆಯನ್ನು ಹಾಳು ಮಾಡಲು ಬಂದಿದ್ದಾರೆ. ಇವರು ಹಿಂಸಾಚಾರ ನಡೆಸಿದ್ದಾರೆ ಎಂದು ಟಿಕತ್ ಗಂಭೀರ ಆರೋಪ ಮಾಡಿದ್ದಾರೆ.

ಸಿಖ್ ರನ್ನು ಗುರಿಯಾಗಿಸಿ ದೇಶ ವಿರೋಧಿ ಎಂದು ಸಾಬೀತು ಪಡಿಸಲು ಯತ್ನಿಸಲಾಗಿದೆ. ಗಡಿಭಾಗದಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಸ್ಥಗಿತಗೊಳಿಸಲು ಉತ್ತರ ಪ್ರದೇಶ ಸರ್ಕಾರವೂ ಬಿಜೆಪಿಗೆ ಜೊತೆಯಾಗಿದೆ ಎಂದು ಟಿಕತ್ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version