ಆಘಾತ: ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೇನ್ ರಿಗೆ ಹೃದಯಾಘಾತ; ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

26/09/2023

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೇನ್ ರಿಗೆ ಹೃದಯಾಘಾತವಾಗಿದೆ. ಹೀಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ರಿಗೆ ಹೃದಯಾಘಾತ ಆಗಿದ್ದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಜಲೀಲ್ ಪಾರ್ಕರ್ ಹೇಳಿದ್ದಾರೆ.

ಸಂಜೆ ಹುಸೇನ್ ರಿಗೆ ಅಧಿಕ ರಕ್ತದೊತ್ತಡ ಉಂಟಾಯಿತು. ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಅವರು ನನಗೆ ಈ ಕುರಿತು ಮಾಹಿತಿ ನೀಡಿದರು. ಆವಾಗ ಹುಸೇನ್ ರಿಗೆ ಹೃದಯಾಘಾತ ಆಗಿರುವುದು ಗೊತ್ತಾಗಿದೆ. ಹೃದ್ರೋಗ ತಜ್ಞ ಸುರೇಶ್ ವಿಜನ್ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಅವರ ಹೃದಯ ಸ್ನಾಯುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯ ಪಾರ್ಕರ್ ಹೇಳಿದ್ದಾರೆ.

ಇದಕ್ಕೂ ಮುನ್ನ, ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿರುವ ಹುಸೇನ್, ಏಷ್ಯನ್ ಕ್ರೀಡಾಕೂಟದಲ್ಲಿ ನೌಕಾಯಾನದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ನೇಹಾ ಠಾಕೂರ್ ಅವರನ್ನು ಅಭಿನಂದಿಸಿದ್ದರು.

ಇತ್ತೀಚಿನ ಸುದ್ದಿ

Exit mobile version