7:16 AM Thursday 11 - December 2025

ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದು, ಬಳೆ ತೊಡಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು

08/02/2021

ಮುಂಬೈ:  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ ಬಿಜೆಪಿ ನಾಯಕನಿಗೆ ಶಿವಸೇನೆ ಕಾರ್ಯಕರ್ತರು ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದ್ದು, ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಬಿಜೆಪಿ ನಾಯಕ ಶಿರೀಶ್ ಕಟೇಕರ್ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದಿದ್ದು,  ಮುಖ್ಯಮಂತ್ರಿಯ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಮಾಡಿದ್ದಕ್ಕೆ  ಕಟೇಕರ್ ಮುಖಕ್ಕೆ ಮಸಿ ಬಳಿದಿದ್ದೇವೆ ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಕಟೇಕರ್ ಗೆ ಮಸಿ ಬಳಿದು ಬಳೆ ಹಾರಹಾಕಿ ಸೀರೆ ಹೊದಿಸಿದ್ದೇವೆ. ನಮ್ಮ ನಾಯಕರ ಬಗ್ಗೆ ಈ ರೀತಿ ನಡೆದುಕೊಂಡರೆ, ನಾವು ಯಾವ ಕೆಲಸ ಮಾಡಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ ಎಂದು ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version