4:41 AM Saturday 24 - January 2026

ಜೆ.ಪಿ.ನಡ್ಡಾಗೆ ಆರತಿ ಎತ್ತಿ ಮನೆಗೆ ಬರ ಮಾಡಿಕೊಂಡ ಸಿ.ಟಿ.ರವಿ

nadda
21/02/2023

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಸಿ.ಟಿ. ರವಿ ಮನೆಗೆ ಆಗಮಿಸಿದ್ದು, ಈ ವೇಳೆ  ಆರತಿ ಎತ್ತಿ, ಮನೆಗೆ ಬಾರುವ ದಾರಿಗೆ ಹೂವನ್ನ ಹಾಕಿ ನಡ್ಡಾ ಅವರನ್ನು ಸ್ವಾಗತಿಸಲಾಯಿತು.

ಇದೇ ವೇಳೆ ಹುಲಿಕೆರೆ ಮಠದ ವೀರೂಪಾಕ್ಷ ಲಿಂಗ ಸ್ವಾಮಿ, ಶಂಕರದೇವರ ಮಠ ಚಂದ್ರಶೇಖರ ಸ್ವಾಮಿಜಿ, ಬಸವಮಂದಿರದ ಮರುಳಸಿದ್ದ ಸ್ವಾಮೀಜಿಗಳ ಆಶೀರ್ವಾದವನ್ನು ನಡ್ಡಾ ಪಡೆದರು.

ನಡ್ಡಾಗೆ ಮೂವರು ಸ್ವಾಮೀಜಿಗಳೂ  ಸನ್ಮಾನ ಮಾಡಿದ್ದು, ಈ ವೇಳೆ ನಡ್ಡಾ ಸ್ವಾಮೀಜಿಗಳ ಕಾಲು ಮುಟ್ಟಿ ನಮಸ್ಕರಿಸಿದರು. ಈ ಮೂರು ಸ್ವಾಮೀಜಿಗಳು ಕೂಡ ಲಿಂಗಾಯಿತ ಸಮುದಾಯಕ್ಕೆ ಸೇರಿದ ಮಠಗಳ ಸ್ವಾಮೀಜಿಗಳಾಗಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version