10:44 PM Thursday 16 - October 2025

ಟ್ರಾಕ್ಟರ್ ಟ್ರಾಲಿಯಲ್ಲಿ ಸೆಗಣಿ ತಂದು ಬಿಜೆಪಿ ನಾಯಕನ ಮನೆಯ ಮುಂದೆ ಚೆಲ್ಲಿದ ರೈತರು!

02/01/2021

ಚಂಡೀಗಢ:  ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ನ ಹೋಶಿಯಾರ್ ಪುರದಲ್ಲಿ ಪ್ರತಿಭಟನಾಕಾರರು ಬಿಜೆಪಿ ಮುಖಂಡರೊಬ್ಬರ ಮನೆಯ ಮುಂದೆ ಟ್ರಾಕ್ಟರ್ ಟ್ರಾಲಿಯಲ್ಲಿ ದನದ ಸೆಗಣಿ ತಂದು ಸುರಿದ ಘಟನೆ ನಡೆದಿದೆ.

ತನ್ನ ಮನೆಯ ಮುಂದೆ ರೈತರು ಸೆಗಣಿ ಸುರಿದ ಘಟನೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಬಿಜೆಪಿಯ ಮಾಜಿ ಸಚಿವ,  ತೀಕ್ಷಣ್ ಸೂದ್  ಕೂಡ ಪ್ರತಿಯಾಗಿ ಧರಣಿ ನಡೆಸಿದ್ದಾರೆ. ಮನೆಯ ಮುಂದೆ ಸೆಗಣಿ ಸುರಿದು  ಬಿಜೆಪಿ ನಾಯಕ ತೀಕ್ಷಣ್ ಸೂದ್ ಗೆ ರೈತರು ಮುಜುಗರ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತೀಕ್ಷಣ್ ಸೂದ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ ರೈತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಸಂದರ್ಭ ಟ್ರಾಕ್ಟರ್ ಟ್ರಾಲಿಯಲ್ಲಿ ಸೆಗಣಿ ತಂದು ಅವರ ಮನೆ ಮುಂಭಾಗದಲ್ಲಿ ಸುರಿಯಲಾಯಿತು.

ಇನ್ನೂ ಈ ಘಟನೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದು, ಯಾರು ಕೂಡ ಈ ರೀತಿಯ ವರ್ತನೆ ತೋರಬೇಡಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version