ಲಿಂಗಾಯತ ಮತ ಒಡೆಯದಂತೆ ಬಿಜೆಪಿ ಪ್ಲಾನ್: ಹಳೇ ಮೈಸೂರಿಗೆ ವಿಜಯೇಂದ್ರ ಎಂಟ್ರಿ!

by vijayendra
21/04/2023

ಚಾಮರಾಜನಗರ: ಬಿಜೆಪಿ ಲಿಂಗಾಯತರ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಹೊತ್ತಿನಲ್ಲೇ ಲಿಂಗಾಯತ ಸಮುದಾಯದ ಯುವನಾಯಕ ಬಿ.ವೈ.ವಿಜಯೇಂದ್ರ ಹಳೇ ಮೈಸೂರಿನಲ್ಲಿ ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.

ಲಿಂಗಾಯತ ಸಮುದಾಯದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಬಿ.ವೈ.ವಿಜಯೇಂದ್ರ ಇಂದಿನಿಂದ ಹಳೇ‌ ಮೈಸೂರು ಭಾಗದಲ್ಲಿ ಪ್ರಚಾರ ಆರಂಭಿಸುತ್ತಿದ್ದು, ಮೊದಲಿಗೆ ಚಾಮರಾಜನಗರ ಜಿಲ್ಲೆಯ ಹನೂರು ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ.

ಹನೂರಿನಲ್ಲಿ ಒಂದು ಕಡೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮೂರು ಸ್ಥಳಗಳಲ್ಲಿ ಸಮಾವೇಶ ನಡೆಸಲಿರುವ ವಿಜಯೇಂದ್ರ ಬಳಿಕ ಮೈಸೂರಿನ ಕೃಷ್ಣರಾಜ ಕ್ಷೇತ್ರ ಹಾಗೂ ವರುಣಾ, ಟೀ.ನರಸೀಪುರ ಕ್ಷೇತ್ರಗಳಲ್ಲಿ ಮತ ಶಿಕಾರಿ ನಡೆಸಲಿದ್ದಾರೆ.

ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ವಿಜಯೇಂದ್ರ ಸಂಚಾರ‌ ಮಾಡಲಿದ್ದು, ಹಳೇ ಮೈಸೂರು ವಶ ಮಾಡಿಕೊಳ್ಳುವ ಬಿಜೆಪಿ ರಣತಂತ್ರಕ್ಕೆ  ವಿಜಯೇಂದ್ರ ಈಗ ಎಂಟ್ರಿಯಾಗಿದ್ದಾರೆ. ಕಾಂಗ್ರೆಸ್ ಆರೋಪಗಳ ನಡುವೆ ವಿಜಯೇಂದ್ರ ಬರುತ್ತಿರುವುದು ರಾಜಕೀಯ ಜಿದ್ದಾಜಿದ್ದಿ ಮತ್ತಷ್ಟು  ಹೆಚ್ಚಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version