ಮತಗಟ್ಟೆಯಲ್ಲಿ ಬುರ್ಖಾ ತೆಗೆಸಿ ಐಡಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ: ವ್ಯಾಪಕ ವಿರೋಧ

ಬಿಜೆಪಿಯ ಹೈದರಾಬಾದ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಮತಗಟ್ಟೆಯೊಂದರಲ್ಲಿ ಬುರ್ಖಾಧಾರಿ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಅವರಿಗೆ ಅವರ ಶಿರವಸ್ತ್ರ ತೆಗೆದು ಮುಖ ತೋರಿಸುವಂತೆ ಹೇಳುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಇದರ ಬೆನ್ನಿಗೆ ಎಐಎಂಐಎ ಅಧ್ಯಕ್ಷ ಹಾಗೂ ಪಕ್ಷದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಹೈದರಾಬಾದ್ ಲೋಕಸಭಾ ಕ್ಷೇತ್ರ ಅಮೃತ ವಿದ್ಯಾಲಯದಲ್ಲಿ ತಮ್ಮ ಮತದಾನಗೈದ ಅನಂತರ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಆಝಂಪುರ್ ಎಂಬಲ್ಲಿನ ಮತಗಟ್ಟೆಯಲ್ಲಿ ಆಕೆ ಮತದಾನಕ್ಕೆ ಕಾದಿದ್ದ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಬುರ್ಖಾಧಾರಿ ಮಹಿಳೆಯರಿಗೆ ಮುಖ ತೋರಿಸುವಂತೆ ಹೇಳುವುದು ಹಾಗೂ ಅವರು ಅಂತೆಯೇ ಮಾಡುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಐಡಿ ಕಾರ್ಡ್ಗಳನ್ನು ಸರಿಯಾಗಿ ಪರಿಶೀಲಿಸಿದ ಅನಂತರವೇ ಮತದಾನಕ್ಕೆ ಅನುಮತಿಸಬೇಕೆಂದೂ ಅವರು ಚುನಾವಣಾಧಿಕಾರಿಗಳಿಗೆ ಸೂಚಿಸುವುದು ಕಾಣಿಸುತ್ತದೆ. ಮತದಾರರ ಪಟ್ಟಿಯಲ್ಲಿ ಹಲವು ನ್ಯೂನತೆಗಳಿಗೆ ಹಲವು ಮತದಾರರ ಹೆಸರುಗಳು ಕಾಣೆಯಾಗಿವೆ ಎಂದೂ ಆಕೆ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ರಾಮ ನವಮಿ ರ‍್ಯಾಲಿ ಸಂದರ್ಭ ಮಸೀದಿಯತ್ತ ಬಿಲ್ಲು ಬಾಣ ಪ್ರಯೋಗಿಸುವ ಸನ್ನೆ ಮಾಡಿ ವಿವಾದಕ್ಕೀಡಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth