ಚೀನಾದ ಕಮ್ಯೂನಿಸ್ಟ್ ಪಕ್ಷದೊಂದಿಗೆ ಬಿಜೆಪಿ ಸಭೆ: ಕಾಂಗ್ರೆಸ್ ಮಾಡಿದ ಆ ಆರೋಪ ಏನು..?

21/05/2024

ಚೀನಾದ ಕಮ್ಯೂನಿಸ್ಟ್ ಪಕ್ಷದೊಂದಿಗೆ 2008ರಿಂದ ಈವರೆಗೆ ಬಿಜೆಪಿಯು 12 ಸಭೆಗಳನ್ನು ನಡೆಸಿದೆ.
ಆ ಸಭೆಗಳ ಸಂಪೂರ್ಣ ದಾಖಲೆ ನೀಡುವಂತೆ ಕಾಂಗ್ರೆಸ್ ಹೇಳಿದೆ. ‘ಈ ಪ್ರತಿ ಸಭೆಗಳಲ್ಲಿ ಏನಾಗಿದೆ, ಎರಡು ಪಕ್ಷಗಳು ಏಕೆ ಆಗಾಗ್ಗೆ ಸಭೆ ನಡೆಸಿದೆ’ ಎಂದು ವಿವರಿಸಲು ಕಾಂಗ್ರೆಸ್‌ ಬಿಜೆಪಿಗೆ ತಿಳಿಸಿದೆ.

ಜೂನ್ 2020 ರಿಂದ ಪ್ರಧಾನಿ, ಚೀನಾವು ಲಡಾಖ್‌ನಲ್ಲಿ ಮಾಡಿದ ಕಾರ್ಯಗಳಿಗೆ ಕ್ಲೀನ್ ಚಿಟ್ ನೀಡಿದ ಅನಂತರ ಭಾರತದ ಜನರು ಚೀನಾದ ವಿರುದ್ಧ ನಿಲ್ಲಲು ಬಿಜೆಪಿಗೆ ಏಕೆ ಇಷ್ಟವಿರಲಿಲ್ಲ ಎಂದು ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಚೀನಾದ ಕಮ್ಯೂನಿಸ್ಟ್ ಪಕ್ಷದ ನಡುವಿನ ನಿಕಟ ಸಂಪರ್ಕಗಳು ಇದಕ್ಕೆ ಕಾರಣವೇ” ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಪ್ರಶ್ನಿಸಿದ್ದಾರೆ.

2008ರಿಂದ ಈವರೆಗೆ ಕನಿಷ್ಠ 12 ಸಭೆಗಳು ನಡೆದಿವೆ. ಬಿಜೆಪಿ ರಾಜಕಾರಣಿಗಳು ಚೀನಾದ ಕಮ್ಯೂನಿಸ್ಟ್ ಪಕ್ಷದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅದು ಕೂಡಾ ಬಹುತೇಕ ಸಭೆ, ಭೇಟಿ ಚೀನಾದಲ್ಲಿಯೇ ನಡೆದಿದೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version