ತಾಯಿಗೇ ಮಗಳ ಅಶ್ಲೀಲ ಫೋಟೋ ಕಳಿಸಿ ಬ್ಲ್ಯಾಕ್‌ಮೇಲ್; ಬೆಂಗಳೂರು ಮೂಲದ ಆರೋಪಿಯ ಪತ್ತೆಗೆ ಸೆನ್ ಪೊಲೀಸ್ ಬಲೆ!

police
12/06/2026

ಚಿಕ್ಕಮಗಳೂರು: ಹೆತ್ತ ತಾಯಿಗೇ ಆಕೆಯ ಮಗಳ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸಿ, ಹಣಕ್ಕಾಗಿ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ ಬೆಂಗಳೂರು ಮೂಲದ ಕಿರಾತಕನೊಬ್ಬನ ವಿರುದ್ಧ ಚಿಕ್ಕಮಗಳೂರು ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ಯೋಗೀಶ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಯೊಬ್ಬರಿಗೆ ಈತ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ್ದಾನೆ.

ಲಕ್ಕವಳ್ಳಿ ಮೂಲದ ಮಹಿಳೆಯ 25 ವರ್ಷದ ಮಗಳ ಅಶ್ಲೀಲ ಫೋಟೋಗಳನ್ನು ಆರೋಪಿ ಯೋಗೀಶ್, ಅವುಗಳನ್ನು ಆಕೆಯ ತಾಯಿಗೇ ಮೊಬೈಲ್ ಮೂಲಕ ಕಳುಹಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ತನಗೆ ತಕ್ಷಣವೇ ದೊಡ್ಡ ಮೊತ್ತದ ಹಣ ನೀಡಬೇಕು, ಇಲ್ಲದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಡುವುದಾಗಿ ಭೀತಿ ಹುಟ್ಟಿಸಿದ್ದಾನೆ.

ಅಲ್ಲದೆ, ಪ್ರತಿದಿನ ರಾತ್ರಿ ವೇಳೆ ಮಹಿಳೆಗೆ ಫೋನ್ ಮಾಡಿ ಹಣ ನೀಡುವಂತೆ ತೀವ್ರವಾಗಿ ಪೀಡಿಸುತ್ತಾ, ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆರೋಪಿಯ ನಿರಂತರ ಬೆದರಿಕೆ ಹಾಗೂ ಕಿರುಕುಳದಿಂದ ಕಂಗಾಲಾದ ನೊಂದ ಮಹಿಳೆ, ಅಂತಿಮವಾಗಿ ಚಿಕ್ಕಮಗಳೂರಿನ ಸೆನ್ (ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಯೋಗೀಶ್ ಪತ್ತೆಗಾಗಿ ಸೆನ್ ಪೊಲೀಸರು ಜಾಲ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version