7:16 PM Saturday 18 - October 2025

ಗಾಝಾ ಕದನ ವಿರಾಮ ಅಂತ್ಯಕ್ಕೆ ಹಮಾಸ್ ಕಾರಣ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿಕೆ

02/12/2023

ಗಾಝಾ ಪಟ್ಟಿಯಲ್ಲಿನ ಕದನ ವಿರಾಮ ಅಂತ್ಯಕ್ಕೆ ಹಮಾಸ್ ಕಾರಣ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಶನಿವಾರ ಆರೋಪಿಸಿದ್ದಾರೆ. ಪೆಲೆಸ್ತೀನ್ ಬಂಡುಕೋರರ ಗುಂಪು ಕೆಲವು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ನೀಡಿದ ಭರವಸೆಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ದುಬೈನಲ್ಲಿ ನಡೆದ ಸಿಒಪಿ 28 ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕೆನ್, ಹಮಾಸ್ “ಜೆರುಸಲೇಂನಲ್ಲಿ ಭೀಕರ ದಾಳಿ ನಡೆಸಿದೆ” ಎಂದು ಹೇಳಿದರು. ಜೆರುಸಲೇಂನ ಬಸ್ ನಿಲ್ದಾಣದಲ್ಲಿ ಗುರುವಾರ ಫೆಲೆಸ್ತೀನ್ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ನಂತರ ಹೇಳಿಕೆಯೊಂದರಲ್ಲಿ ಹಮಾಸ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಹಮಾಸ್ ಶುಕ್ರವಾರ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆರೋಪಿಸಿದರು. ಗಾಜಾ ಪಟ್ಟಿಯಿಂದ ದಕ್ಷಿಣ ಕರಾವಳಿ ನಗರ ಅಶ್ದೋಡ್ ನ ಗಡಿ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಸುಮಾರು 50 ರಾಕೆಟ್ ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಉಲ್ಲೇಖಿಸಿದೆ.

ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಬ್ಲಿಂಕೆನ್ ಕೂಡಾ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ ಇಸ್ರೇಲ್ ಮತ್ತು ಮಧ್ಯವರ್ತಿಗಳಾದ ಈಜಿಪ್ಟ್ ಮತ್ತು ಕತಾರ್ ನೊಂದಿಗೆ ಕದನ ವಿರಾಮವನ್ನು ಮತ್ತೆ ಜಾರಿಗೆ ತರುವ ಪ್ರಯತ್ನಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version