5:32 PM Saturday 25 - October 2025

ಅವಘಡ: ಗುಜರಾತ್ ನ ಮುಂದ್ರಾ ಬಂದರಿನಲ್ಲಿ ದೋಣಿಗೆ ಬೆಂಕಿ..!

22/11/2023

ಗುಜರಾತ್ ನ ಹಳೆಯ ಮುಂದ್ರಾ ಬಂದರಿನಲ್ಲಿ ದೋಣಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕ್ಕಿ ತುಂಬಿದ ದೋಣಿಯಲ್ಲಿ ಲೋಡಿಂಗ್ ಪ್ರಕ್ರಿಯೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಬೆಂಕಿಯನ್ನು ನಂದಿಸಲು ಅದಾನಿ ಗ್ರೂಪ್ ‌ನ ಎರಡು ಮತ್ತು ಮತ್ತೊಂದು ಖಾಸಗಿ ಕಂಪನಿಯ ಒಂದು ಸೇರಿದಂತೆ ಮೂರು ಅಗ್ನಿಶಾಮಕ ಟೆಂಡರ್ ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

ಈ ದೋಣಿಯನ್ನು ಅಮದ್ ಭಾಯ್ ಸಂಧರ್ ಗೆ ಸೇರಿದ್ದು ಎಂದು ಗುರುತಿಸಲಾಗಿದ್ದು, ಜಾಮ್ ನಗರದಲ್ಲಿ ನೋಂದಣಿಯಾಗಿದೆ. ಬಂದರು ನಿರ್ವಹಣಾ ಇಲಾಖೆ ಮತ್ತು ಪೊಲೀಸರು ಬಂದರಿನಲ್ಲಿ ಬೆಂಕಿ ಎಚ್ಚರಿಕೆಗೆ ತ್ವರಿತವಾಗಿ ಸ್ಪಂದಿಸಿದರು.

ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಹಾನಿಯ ಪೂರ್ಣ ಪ್ರಮಾಣವನ್ನು ಇನ್ನೂ ನಿರ್ಣಯಿಸಲಾಗಿಲ್ಲ.

ಇತ್ತೀಚಿನ ಸುದ್ದಿ

Exit mobile version