ರಷ್ಯಾದಲ್ಲಿ ಯುದ್ಧದಲ್ಲಿ ಸಾವನ್ನಪ್ಪಿದ ಹೈದರಾಬಾದ್ ವ್ಯಕ್ತಿಯ ಶವ ಸ್ವದೇಶಕ್ಕೆ ರವಾನೆ

18/03/2024

ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸಲ್ಪಟ್ಟ ಮತ್ತು ಉಕ್ರೇನ್ ಯುದ್ಧದಲ್ಲಿ ಕೊಲ್ಲಲ್ಪಟ್ಟ ಹೈದರಾಬಾದ್ ನಿವಾಸಿಯ ಶವ ಭಾನುವಾರ ಬಜಾರ್ ಘಾಟ್ ನಲ್ಲಿರುವ ಅವರ ನಿವಾಸಕ್ಕೆ ಬಂದಿದೆ.
ಮುಹಮ್ಮದ್ ಅಸ್ಫಾನ್ (30) ಎಂಬ ವ್ಯಕ್ತಿ ಉದ್ಯೋಗ ವಂಚನೆಗೆ ಬಲಿಯಾಗಿ ರಷ್ಯಾ ಸೇನೆಗೆ ಬಲವಂತವಾಗಿ ಸೇರಿಕೊಂಡಿದ್ದರು.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾರ್ಚ್ 6 ರಂದು ಅವರ ನಿಧನವನ್ನು ದೃಢಪಡಿಸಿತ್ತು. ಅಸ್ಫಾನ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅವರ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, “ಭಾರತೀಯ ಪ್ರಜೆ ಶ ಮುಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಾವು ಕುಟುಂಬ ಮತ್ತು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಮಿಷನ್ ಪ್ರಯತ್ನಗಳನ್ನು ಮಾಡಿದೆ” ಎಂದು ಅದು ಪತ್ರದಲ್ಲಿ ತಿಳಿಸಿತ್ತು.

ಯುದ್ಧದಲ್ಲಿ ರಷ್ಯಾದ ಸೈನ್ಯಕ್ಕೆ ಸಹಾಯ ಮಾಡಲು ‘ಸಹಾಯಕರಾಗಿ’ ನೇಮಕಗೊಂಡ ಮೋಸಗಾರ ಏಜೆಂಟರು ಅಸ್ಫಾನ್ ಮತ್ತು ಇತರ ಹಲವರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version