ಬಿಜೆಪಿ ಭೀಷ್ಮ ಅಡ್ವಾಣಿಗೆ ‘ಭಾರತ ರತ್ನ’ ಕಿರೀಟ: ಪ್ರಧಾನಿಯಿಂದ ಅಧಿಕೃತ ಘೋಷಣೆ

03/02/2024

ಬಿಜೆಪಿ ಪಕ್ಷದ ಪ್ರಮುಖ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿ 1927 ರ ನವೆಂಬರ್ 8 ರಂದು ಬ್ರಿಟಿಷ್ ಭಾರತದ ಕರಾಚಿಯಲ್ಲಿ ಜನಿಸಿದರು. ಅವರ ಪೋಷಕರು ಕಿಶನ್ ಚಂದ್ ಡಿ ಅಡ್ವಾಣಿ ಮತ್ತು ಗ್ಯಾನಿ ದೇವಿ. 1947 ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಅಡ್ವಾಣಿ ಅವರ ಕುಟುಂಬವು ಭಾರತಕ್ಕೆ ವಲಸೆ ಬಂದು ಬಾಂಬೆಯಲ್ಲಿ ನೆಲೆಸಿತ್ತು.

ಅಡ್ವಾಣಿಯವರು ಸೇಂಟ್ ಪ್ಯಾಟ್ರಿಕ್ಸ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ ನಂತರ ಸಿಂಧ್ ನ ಹೈದರಾಬಾದ್ ನ ಡಿಜಿ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅವರು ಬಾಂಬೆ ವಿಶ್ವವಿದ್ಯಾಲಯದ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು.

1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಜನಸಂಘಕ್ಕೆ ಸೇರಿದರು. ಅಡ್ವಾಣಿ 1970 ರಲ್ಲಿ ರಾಜ್ಯಸಭೆಯ ಸದಸ್ಯರಾದರು, 1989 ರವರೆಗೆ ತಮ್ಮ ಸ್ಥಾನವನ್ನು ಅಲಂಕರಿಸಿದರು. ಡಿಸೆಂಬರ್ 1972 ರಲ್ಲಿ, ಅವರು ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇತ್ತೀಚಿನ ಸುದ್ದಿ

Exit mobile version