S.S.L.Cಯಲ್ಲಿ ಡಿಸ್ಟಿಂಗ್ಷನ್ ನಲ್ಲಿ ಪಾಸ್: ಖುಷಿಯಲ್ಲಿ ಮೂರ್ಛೆ ಹೋದ ಬಾಲಕ!

ಮೀರತ್: SSLC ಪರೀಕ್ಷೆಯಲ್ಲಿ ಶೇ.93.5ರಷ್ಟು ಅಂಕ ಪಡೆದ ಖುಷಿಯಲ್ಲಿ ವಿದ್ಯಾರ್ಥಿಯೋರ್ವ ಮೂರ್ಛೆ ಹೋದ ಘಟನೆ ನಡೆದಿದ್ದು, ಸದ್ಯ ಬಾಲಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರ ಪ್ರದೇಶದ ಮೀರತ್ ನ 16 ವರ್ಷ ವಯಸ್ಸಿನ ಅಂಶುಲ್ ಕುಮಾರ್ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 10ನೇ ತರಗತಿಯಲ್ಲಿ 93.5ರಷ್ಟು ಅಂಕಗಳೊಂದಿಗೆ ಡಿಸ್ಟಿಂಗ್ಷನ್ ನಲ್ಲಿ ಪಾಸ್ ಆಗಿರುವುದನ್ನು ನೋಡಿ ಖುಷಿಯಲ್ಲಿ ಕುಣಿದಾಡಿದ್ದ. ಅದೇ ಖುಷಿಯಲ್ಲಿದ್ದ ಆತ ಮೂರ್ಛೆ ಹೋಗಿದ್ದು, ಇದೀಗ ಮಗನ ಸ್ಥಿತಿ ನೆನೆದು ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.
ಅಂಶುಲ್ ಕುಮಾರ್ ಮೂರ್ಛೆ ಹೋದ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈವರೆಗೂ ಆತನ ಆರೋಗ್ಯದಲ್ಲಿ ಚೇತರಿಕೆಯಾಗದೇ ಇರುವುದು ಕುಟುಂಬಸ್ಥರಿಗೆ ಆತಂಕ ಸೃಷ್ಟಿ ಮಾಡಿದೆ.
ಮಗ ಡಿಸ್ಟಿಂಗ್ಷನ್ ನಲ್ಲಿ ಪಾಸ್ ಆಗಿರುವ ಸಂತಸದಲ್ಲಿದ್ದ ಕುಟುಂಬಸ್ಥರು ಇದೀಗ ಮಗನ ಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದಾರೆ. ಮಗನ ಆರೋಗ್ಯ ಚೇತರಿಕೆಯಾಗಲಿ ಎಂದು ಪಾರ್ಥಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth