ಬೆಚ್ಚಿ ಬೀಳಿಸಿದ ಘಟನೆ: ಬಸ್ ತಡೆದು ಬಾಲಕಿಯ ಕತ್ತು ಸೀಳಿದ ಬಾಲಕರು

kaluburgi
23/02/2024

ಕಲಬುರಗಿ: ಬಸ್ ತಡೆದು ಅಪ್ರಾಪ್ತ ಬಾಲಕಿಯ ಮೇಲೆ ಬಾಲಕರಿಬ್ಬರು ಚಾಕುವಿನಿಂದ ದಾಳಿ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ.

ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ಅಪ್ರಾಪ್ತೆ ಬಸ್ ನಲ್ಲಿ ತೆರಳುವಾಗ ಬಸ್ ತಡೆದ ಅಪ್ರಾಪ್ತ ಬಾಲಕರು, ಬಾಲಕಿಯ ಕತ್ತು ಸೀಳಿದ್ದು, ತಕ್ಷಣವೇ ಆಕೆಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಬಾಲಕಿ ಮೇಲೆ ದಾಳಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version