12:25 AM Thursday 16 - October 2025

ಬಿಪಿಎಲ್ ಕಾರ್ಡ್; ವರಸೆ ಬದಲಿಸಿದ ಕತ್ತಿ

15/02/2021

ಬೆಂಗಳೂರು: ಟಿವಿ, ಬೈಕ್, ಫ್ರಿಡ್ಜ್, 5 ಎಕರೆ ಜಮೀನು ಇವುಗಳಲ್ಲಿ ಯಾವುದೇ ಒಂದು ವಸ್ತುವಿದ್ದರೂ ಅಂತಹವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಾಗಿ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಸಚಿವರು ಎಚ್ಚೆತ್ತುಕೊಂಡಿದ್ದಾರೆ.

ಬಿಪಿಎಲ್ ಕಾರ್ಡ್ ವಿಚಾರವಾಗಿ ತಾವು ನೀಡಿದ ಹೇಳಿಕೆಯನ್ನು ತಿದ್ದಿಕೊಂಡಿರುವ ಸಚಿವರು, ಬಿಪಿಎಲ್ ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ. ಮುಂದೆಯೂ ಯಾವುದೇ ತಿದ್ದುಪಡಿ ಮಾಡುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version