ಅರ್ಥ ಮಾಡಿಕೊಳ್ಳಿ, ಬ್ರಾಹ್ಮಣರು ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ: ಜಾತಿ ಬಗ್ಗೆ ಅಮೆರಿಕ ಪ್ರಸ್ತಾಪ!

peter navarro
01/09/2025

ವಾಷಿಂಗ್ಟನ್: ಭಾರತದ ಮೇಲೆ ಸುಂಕ ಅಸ್ತ್ರ ಪ್ರಯೋಗಿಸಿರುವ ಅಮೆರಿಕ ಇದೀಗ ಭಾರತದಲ್ಲಿನ ಆಂತರಿಕ ವಿಚಾರಗಳಿಗೂ ಮೂಗು ತೂರಿಸಿದ್ದು, ಭಾರತದಲ್ಲಿ ಜಾತಿ ಆರ್ಥಿಕ ಅಸಮಾನತೆಯ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ(Peter Navarro )ಪ್ರಸ್ತಾಪಿಸಿದ್ದಾರೆ.

ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ (SCO Summit) ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಮಾತುಕತೆ ನಡೆಸುತ್ತಿರುವುದರ ನಡುವೆ ಪೀಟರ್ ನವರೋ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಟಿವಿ ವಾಹಿನಿ ಜೊತೆ ಮಾತನಾಡಿರುವ ಪೀಟರ್ ನವರೋ, ಮೋದಿ ಅವರು ಪುಟಿನ್ ಮತ್ತು ಕ್ಸಿಜಿನ್ ಪಿಂಗ್ ಜೊತೆಗೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗ್ತಾ ಇಲ್ಲ, ನಾನು ಭಾರತೀಯರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ, ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಣರು ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version