ಹೆಂಡತಿಯ ತಂಗಿ ಬೇಕು ಎಂದು ಹಠ ಹಿಡಿದು ವಿದ್ಯುತ್ ಟವರ್ ಏರಿದ ವ್ಯಕ್ತಿ

01/09/2025

ಕನೌಜ್:  ಹೆಂಡತಿಯ ಕಿರಿಯ ತಂಗಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ ವ್ಯಕ್ತಿಯೊಬ್ಬ  ವಿದ್ಯುತ್ ಟವರ್ ಏರಿ ಕುಳಿತ ಘಟನೆ ಉತ್ತರ ಪ್ರದೇಶದ ಕನೌಜ್ ನಲ್ಲಿ ನಡೆದಿದೆ.

ರಾಜ್ ಸಕ್ಸೇನಾ  ಎಂಬಾತ ತನ್ನ ಮೊದಲ ಪತ್ನಿ ಸಾವನ್ನಪ್ಪಿದ ನಂತರ  ಆಕೆಯ ಮತ್ತೊಬ್ಬಳು ತಂಗಿಯನ್ನ  2021ರಲ್ಲಿ ಮದುವೆಯಾಗಿದ್ದ.

ಮದುವೆಯ ಮರು ವರ್ಷವೇ ಆಕೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ನಂತರ ಆಕೆಯ ತಂಗಿಯನ್ನು ಸಕ್ಸೇನಾ ವಿವಾಹವಾಗಿದ್ದ. ಇದಾಗಿ ಎರಡು ವರ್ಷಗಳ ನಂತರ ಇಷ್ಟಕ್ಕೆ ತೃಪ್ತನಾಗದ ಆತ  ಆಕೆಯ ಮತ್ತೊಬ್ಬಳು 17 ವರ್ಷದ ಅಪ್ರಾಪ್ತ ಸಹೋದರಿಯನ್ನೂ ತನಗೆ ಕೊಟ್ಟು ಮದುವೆ ಮಾಡಿಸಿ ಎಂದು ಬೇಡಿಕೆಯಿಟ್ಟಿದ್ದಾನೆ.

ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿರುವ ಕುಟುಂಬಸ್ಥರು ಇದೀಗ ಮೂರನೇ ಮಗಳನ್ನೂ ನೀಡಲು ತಯಾರಿರಲಿಲ್ಲ. ಹೀಗಾಗಿ ಇದು ನಡೆಯುವುದಿಲ್ಲ ಎಂದಾಗ ಹಠ ಹಿಡಿದು ವಿದ್ಯುತ್ ಟವರ್ ಏರಿ ಸುಮಾರು 7 ಗಂಟೆಗಳ ಕಾಲ ಕುಳಿತಿದ್ದಾನೆ.

ಕೊನೆಗೂ ಆತನ ಬೇಡಿಕೆಗೆ ಒಪ್ಪಿಕೊಂಡ ನಂತರ ಆತ ವಿದ್ಯುತ್ ಕಂಬದಿಂದ ಇಳಿದಿದ್ದಾನೆ. ಇದೀಗ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಕುಟುಂಬಸ್ಥರ ದೌರ್ಬಲ್ಯವನ್ನು ಬಳಸಿಕೊಂಡ ಸಕ್ಸೇನಾ ಇದೀಗ ಕುಟುಂಬಕ್ಕೆ ಕಂಟಕವಾಗಿ ಪರಿಣಮಿಸಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version