ಇದ್ದಕ್ಕಿದ್ದಂತೆ ಮುರಿದ ಪಿಲ್ಲರ್: ಸೇತುವೆ ಢಮಾರ್..!

18/07/2023

ಎನ್ ಎಚ್-16ರಲ್ಲಿ ಸೇತುವೆಯ ಒಂದು ಭಾಗವು ಕುಸಿದ ಘಟನೆ ಒಡಿಶಾದ ಜಾಜ್‌ಪುರದಲ್ಲಿ ನಡೆದಿದೆ.
ಹೀಗಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಚೆನ್ನೈ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-16 ರ ಜಾಜ್‌ಪುರ ಜಿಲ್ಲೆಯ ರಸುಲ್‌ಪುರ ಬ್ಲಾಕ್‌ ಬಳಿ ಪಿಲ್ಲರ್ ಮುರಿದು ಸೇತುವೆಯ ಒಂದು ಭಾಗ ಕುಸಿತಗೊಂಡಿದೆ.

ಸ್ಥಳಕ್ಕೆ ಆಗಮಿಸಿರುವ ಸೇತುವೆ ತಜ್ಞರು, ತನಿಖೆಯ ಅನಂತರ ಕುಸಿತದ ನಿಜವಾದ ಕಾರಣ ಏನೆಂದು ನಿರ್ಧರಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಜೆಪಿ ವರ್ಮಾ ತಿಳಿಸಿದ್ದಾರೆ.

2008ರಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಪ್ರಾಥಮಿಕವಾಗಿ ರಚನೆಯ ವೈಫಲ್ಯದಂತೆ ಈ ಘಟನೆ ಕಾಣುತ್ತಿದೆ. ತಜ್ಞರ ಸಮಿತಿಯು ಪರಿಶೀಲಿದ ಅನಂತರವೇ ನಿಜವಾದ ಕಾರಣ ತಿಳಿಯುತ್ತದೆ ಮತ್ತು ಅದನ್ನು ಯಾವಾಗ ಮರು ನಿರ್ಮಾಣ ಮಾಡಿ ಪೂರ್ಣಗೊಳಿಸ ಬಹುದು ಎಂಬುದು ತಿಳಿಯುತ್ತದೆ. ಸದ್ಯಕ್ಕೆ ನಾವು ಟ್ರಾಫಿಕ್‌ಗೆ ತಾತ್ಕಾಲಿಕ ತಿರುವುಗಳನ್ನು ರಚಿಸುತ್ತೇವೆ ಎಂದು ವರ್ಮಾ ಹೇಳಿದ್ದಾರೆ.

ಕಡಿಮೆ ಗುಣಮಟ್ಟ ಮತ್ತು ಕಳಪೆ ಕಾಮಗಾರಿಯಿಂದಾಗಿಯೇ ಈ ಸೇತುವೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849  ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version