9:08 AM Thursday 16 - October 2025

ಮಹಿಳೆಯರ ಅಶ್ಲೀಲ ಚಿತ್ರ ಹರಾಜು ಹಾಕುತ್ತಿದ್ದ ‘ಬುಲ್ಲಿ ಬಾಯ್ಸ್ ಆ್ಯಪ್’ ನಿಷೇಧ

bulli app
03/01/2022

ನವದೆಹಲಿ:  ಮಹಿಳೆಯ ಫೋಟೋವನ್ನು ಅಶ್ಲೀಲವಾಗಿ ಚಿತ್ರಿಸಿ ಅವರನ್ನು ಹರಾಜು ಹಾಕುತ್ತಿದ್ದ ಬುಲ್ಲಿ ಬಾಯ್ಸ್ ಆ್ಯಪ್ ನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

ಒಂದು ಸಮುದಾಯದ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರ ಚಿತ್ರಗಳನ್ನು ಅಶ್ಲೀಲವಾಗಿ  ಚಿತ್ರಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ  ಬುಲ್ಲಿ ಆ್ಯಪ್ ಪೋರ್ಟಲ್ನ್ನು ಗಿಟ್ಹಬ್ ತನ್ನ ವೇದಿಕೆಯಿಂದ ಬ್ಲಾಕ್ ಮಾಡಿದೆ.

ಬುಲ್ಲಿ ಬಾಯ್ಸ್ ಆ್ಯಪ್  ಬ್ಯಾನ್ ಮಾಡಿರುವ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ದೆಹಲಿ ಮತ್ತು ಮುಂಬೈನಲ್ಲಿ ಈ ವಿವಾದಾತ್ಮಕ ಆ್ಯಪ್  ವಿರುದ್ಧ ಪ್ರಕರಣ ದಾಖಲಿಸಲಾಗಿದ್ದ,  ಇನ್ನೂ ಯಾರನ್ನೂ ಬಂಧಿಸಿಲ್ಲ ಪ್ರಸ್ತುತ, ಈ ಪ್ರಕರಣವನ್ನು ಮುಂಬೈ ಸೈಬರ್ ಪೊಲೀಸರು ಮತ್ತು ದೆಹಲಿ ಪೊಲೀಸರು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವನ್ನು ಹೊರತುಪಡಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ? | ಡಿ.ಕೆ.ಶಿವಕುಮಾರ್ ಪ್ರಶ್ನೆ

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ  ವ್ಯಾಕ್ಸಿನೇಷನ್ ಗೆ ಹೆಚ್ಚಿನ ಒತ್ತು!

“ಜೈನಕಾಶಿ ಮೂಡುಬಿದಿರೆಯ ಇಟ್ಟೆಕೊಪ್ಪ ಪೆರಿಯ ಮಂಜವೇ ಕಾನದ ಕಟದರ ಆದಿಮೂಲ”

ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ನಡುವೆ ಜಟಾಪಟಿ

ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!

 

ಇತ್ತೀಚಿನ ಸುದ್ದಿ

Exit mobile version