ಗಾಝಾದಲ್ಲಿ‌ ನರಮೇಧಕ್ಕೆ ಬೈಡನ್ ಕಾರಣ ಎಂದು ಆಕ್ರೋಶ: ಸಿಡಿದೆದ್ದ ಕೊಲಂಬಿಯಾ ಯುನಿವರ್ಸಿಟಿ ವಿದ್ಯಾರ್ಥಿಗಳು

24/04/2024

ಗಾಝಾದಲ್ಲಿನ ಯುದ್ಧಕ್ಕೆ ಪ್ರೇರೆಪಣೆ ನೀಡಿದ್ದನ್ನು ಖಂಡಿಸಿ ಯುನೈಟೆಡ್ ಸ್ಟೇಟ್ಸ್ ನಾದ್ಯಂತದ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಕ್ಷ ಜೋ ಬೈಡನ್ ವಿರುದ್ಧ ಸಿಡಿದೆದ್ದಿದ್ದಾರೆ. ಹೀಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯವು ವರ್ಷದ ಉಳಿದ ದಿನಗಳಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸುವುದಾಗಿ ಘೋಷಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಹಲವಾರು ವಿದ್ಯಾರ್ಥಿಗಳ ಪೋಷಕರು ಬೋಧನಾ ಶುಲ್ಕವನ್ನು ಮರುಪಾವತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ತನ್ನ ಅಧಿಕೃತ ಹೇಳಿಕೆಯಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಅಧ್ಯಕ್ಷರು, “ವಿವಿಧ ಸಮುದಾಯಗಳಾದ್ಯಂತದ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಯ ಬಗ್ಗೆ ಭಯವನ್ನು ವ್ಯಕ್ತಪಡಿಸಿದ್ದಾರೆ. ಭದ್ರತಾ ಕಾಳಜಿಗಳನ್ನು ಪರಿಹರಿಸಲು ನಾವು ತೆಗೆದುಕೊಳ್ಳುತ್ತಿರುವ ಹೆಚ್ಚುವರಿ ಕ್ರಮಗಳನ್ನು ನಾವು ಘೋಷಿಸಿದ್ದೇವೆ” ಎಂದಿದ್ದಾರೆ.

ವಿನಾಶಕಾರಿ ಮಾನವ ಹೋರಾಟಗಳೊಂದಿಗೆ ಮಧ್ಯಪ್ರಾಚ್ಯದಲ್ಲಿ ಭಯಾನಕ ಸಂಘರ್ಷ ನಡೆಯುತ್ತಿದೆ. ದ್ವೇಷವನ್ನು ಕಡಿಮೆ ಮಾಡಲು ಮತ್ತು ಮುಂದಿನ ಹಂತಗಳನ್ನು ಪರಿಗಣಿಸಲು ನಮಗೆಲ್ಲರಿಗೂ ಅವಕಾಶ ನೀಡಲು, ಎಲ್ಲಾ ತರಗತಿಗಳು ಸೋಮವಾರ ವರ್ಚುವಲ್ ಆಗಿ ನಡೆಯಲಿವೆ ಎಂದು ನಾನು ಘೋಷಿಸುತ್ತಿದ್ದೇನೆ ಎಂದಿದ್ದಾರೆ.

ದೂರದಿಂದಲೇ ಕೆಲಸ ಮಾಡಬಲ್ಲ ಬೋಧಕರು ಮತ್ತು ಸಿಬ್ಬಂದಿ ಹಾಗೆ ಮಾಡಬೇಕು. ಅಗತ್ಯ ಸಿಬ್ಬಂದಿ ವಿಶ್ವವಿದ್ಯಾಲಯದ ನೀತಿಯ ಪ್ರಕಾರ ಕೆಲಸಕ್ಕೆ ಹಾಜರಾಗಬೇಕು. ಕ್ಯಾಂಪಸ್‌ನಲ್ಲಿ ವಾಸಿಸದ ವಿದ್ಯಾರ್ಥಿಗಳು ಕ್ಯಾಂಪಸ್ ಗೆ ಬರುವ ಅಗತ್ಯವಿಲ್ಲ ಎಂಬುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೂರ್ವ ಕರಾವಳಿಯ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದವರೆಗೆ, ವಿದ್ಯಾರ್ಥಿಗಳು ಫೆಲೆಸ್ತೀನ್ ಜನರ ಹಿಂದೆ ನಿಂತಿದ್ದಾರೆ ಮತ್ತು ಗಾಝಾದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಮುಗ್ಧ ನಾಗರಿಕರ ಸಾವಿಗೆ ಬೈಡನ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version