ಸರಕಾರಿ ಕಾಲೇಜಿನ ಗ್ರಂಥಪಾಲಕನಿಂದ ರಾಜಕೀಯ ಪಕ್ಷ ಪರ ಪ್ರಚಾರ: ಶಿಸ್ತು ಕ್ರಮಕ್ಕೆ ಎನ್ ಎಸ್ ಯುಐ ಮನವಿ

ರಾಜಕೀಯ ಪಕ್ಷವೊಂದರ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವ ಸರಕಾರಿ ಕಾಲೇಜಿನ ಗ್ರಂಥಪಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಲಾಗಿದೆ. ಅವ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದಲ್ಲಿ ಕಾಲೇಜು ಮುಂದೆ ಪ್ರತಿಭಟನೆ ಮಾಡುವುದಾಗಿ ಎನ್ ಎಸ್ ಯುಐ ನಿಯೋಗ ಎಚ್ಚರಿಕೆ ನೀಡಿದೆ.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಎಂಬುವವರು ಸರಕಾರಿ ನೌಕರರಾಗಿ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಸರಿಯಲ್ಲ. ಒಬ್ಬ ಸರಕಾರಿ ನೌಕರ ಯಾವುದೇ ರಾಜಕೀಯ ಪಕ್ಷದ ಪರ ಇರುವಂತಿಲ್ಲ. ಆದರೆ ಕಾಲೇಜಿನಲ್ಲಿ ಈ ಅಧ್ಯಾಪಕರು ರಾಜಕೀಯ ಪಕ್ಷವೊಂದರ ಪರ ಪ್ರಚಾರ ನಡೆಸುವುದು ತಪ್ಪು. ಈ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಎನ್ ಎಸ್ ಯುಐ ಮನವಿ ಮಾಡಿದೆ.
ಅಲ್ಲದೇ ಕಾಲೇಜು ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಎನ್ ಎಸ್ ಯುಐ ನಿಯೋಗ ನೀಡಿದೆ. ಈ ಸಂದರ್ಭದಲ್ಲಿ ಎನ್.ಎಸ್‌ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತಿಶ ಅಳಕೆಮಜಲು, ಅಡ್ವರ್ಡ್ ಡಿಸೋಜಾ, ಗಗನ್ ದೀಪ್, ನವೀನ್ ಬನ್ನೂರು, ಆಸ್ಟಿನ್ ನಿಯೋಗದಲ್ಲಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw