1:07 AM Saturday 25 - October 2025

ಕೆನಡಾ ಮೂಲದ ಭೂಗತ ಪಾತಕಿ ಲಖ್ಬೀರ್ ಸಿಂಗ್ ಲಂಡಾನನ್ನು ಉಗ್ರ ಎಂದು ಘೋಷಿಸಿದ ಗೃಹ ಸಚಿವಾಲಯ

30/12/2023

ಕೆನಡಾ ಮೂಲದ ಭೂಗತ ಪಾತಕಿ ಲಖ್ಬೀರ್ ಸಿಂಗ್ ಲಾಂಡಾ ಅವರನ್ನು ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.

ಮಾಹಿತಿಗಳ ಪ್ರಕಾರ, 33 ವರ್ಷದ ದರೋಡೆಕೋರ ಖಲಿಸ್ತಾನಿ ಗುಂಪು ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (ಬಿಕೆಐ) ಗೆ ಸೇರಿದವನು. 2021 ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿಯ ಮೇಲೆ ರಾಕೆಟ್ ದಾಳಿಯ ಯೋಜನೆಯಲ್ಲಿ ಭಾಗಿಯಾಗಿದ್ದ. 2022 ರ ಡಿಸೆಂಬರ್ ನಲ್ಲಿ ತಾರ್ನ್ ತರಣ್ ನ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ನಡೆದ ಆರ್ ಪಿಜಿ ದಾಳಿಗೆ ಸಂಬಂಧಿಸಿದಂತೆ ಲಾಂಡಾ ಅವರ ಹೆಸರು ಕೇಳಿಬಂದಿತ್ತು.

ಈ ಭಯೋತ್ಪಾದಕ ಮೂಲತಃ ಪಂಜಾಬ್ ಮೂಲದವನಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದಾನೆ.
ಈತ ಭಾರತದ ವಿರುದ್ಧ ಪಿತೂರಿ ನಡೆಸುವಲ್ಲಿ ಭಾಗಿಯಾಗಿದ್ದಾರೆ.

ಈ ವರ್ಷದ ಸೆಪ್ಟೆಂಬರ್ ನಲ್ಲಿ ಪಂಜಾಬ್ ಪೊಲೀಸರು ಕೆನಡಾ ಮೂಲದ ಭಯೋತ್ಪಾದಕನ ನಿಕಟ ಸಹವರ್ತಿಗಳಿಗೆ ಸಂಬಂಧಿಸಿದ 48 ಸ್ಥಳಗಳಲ್ಲಿ ದಾಳಿ ನಡೆಸಿದ್ದರು.
ಸೆಪ್ಟೆಂಬರ್ ೨೧ ರಂದು ವ್ಯಾಪಾರಿಯೊಬ್ಬರ ಮೇಲೆ ಇಬ್ಬರು ದಾಳಿಕೋರರು ಹಲ್ಲೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಲಾಂಡಾ ಹರಿಕೆ ಎಂದು ಹೇಳಿಕೊಂಡ ವ್ಯಕ್ತಿಯಿಂದ ಕರೆ ಬಂದಿದ್ದು, ೧೫ ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ವ್ಯಾಪಾರಿ ಹೇಳಿದ್ದರು.
ದಾಳಿಯ ನಂತರ ಕೆಲವರನ್ನು ಬಂಧಿಸಲಾಗಿತ್ತು.

ಇತ್ತೀಚಿನ ಸುದ್ದಿ

Exit mobile version