ಭಾರತ ಕೆನಡಾ ಮಧ್ಯೆ ಮತ್ತಷ್ಟು ಬಿರುಕು: ಬೆಂಗಳೂರು, ಮುಂಬೈ ಮತ್ತು ಚಂಡೀಗಢದಲ್ಲಿನ ದೂತಾವಾಸ ಕಚೇರಿ ತಾತ್ಕಾಲಿಕವಾಗಿ ಬಂದ್

21/10/2023

ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಉಂಟಾಗಿದೆ. ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆನಡಾವು, ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ತನ್ನ ರಾಯಭಾರ ಸಿಬ್ಬಂದಿ ಮತ್ತು ನಾಗರೀಕರಿಗೆ ಸೂಚನೆ ನೀಡಿದೆ.

ಅಲ್ಲದೇ ಬೆಂಗಳೂರು, ಮುಂಬೈ ಮತ್ತು ಚಂಡೀಗಢದಲ್ಲಿನ ದೂತಾವಾಸ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ದೆಹಲಿಯ ಕೇಂದ್ರದ ಮೂಲಕವೇ ನಿರ್ವಹಿಸಲಾಗುವುದು ಎಂದು ತಿಳಿಸಿದೆ.

ಭಾರತದ ಎಚ್ಚರಿಕೆಗೆ ಬೆದರಿ ಶುಕ್ರವಾರ ತನ್ನ 41 ರಾಯಭಾರ ಸಿಬ್ಬಂದಿಗಳನ್ನು ತವರಿಗೆ ತೆರಳಿ ಕರೆಸಿಕೊಂಡ ಕೆನಡಾ ಸರ್ಕಾರ, ಅದರ ಬೆನ್ನಲ್ಲೇ ತನ್ನ ನಾಗರೀಕರಿಗೆ ಹಲವು ಸಲಹಾವಳಿ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿನ ಕೆನಡಾ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಸಲಹಾವಳಿಯಲ್ಲಿ ಕೆನಡಾ ಮತ್ತು ಭಾರತದ ನಡುವಿನ ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೆನಡಿಯನ್ನರ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೊತೆಗೆ ಕೆನಡಾ ವಿರೋಧಿ ಪ್ರತಿಭಟನೆಗೆ ಕರೆ ನೀಡುವ ಮತ್ತು ಕೆನಡಿಯನ್ನರಿಗೆ ಬೆದರಿಕೆ ಹಾಕುವವ ಅಥವಾ ತೊಂದೆ ನೀಡುವ ಸಾಧ್ಯತೆಗಳಿವೆ.

ಹೆಚ್ಚುವರಿ ರಾಯಭಾರ ಕಚೇರಿಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಭಾರತದ ಬೇಡಿಕೆ ಅಸಮಂಜಸ ಹಾಗೂ ಬೆದರಿಕೆ ಎಂದು ಕೆನಡಾ ಟೀಕಿಸಿದ್ದು, ಇದಕ್ಕೆ ಭಾರತವೂ ಕೂಡಾ ತಿರುಗೇಟು ನೀಡಿದೆ. ಅಂತರಾಷ್ಟ್ರೀಯ ಒಪ್ಪಂದದಂತೆ ನಾವು ನಡೆದುಕೊಂಡಿದ್ದೇವೆ ಎಂದು ಹೇಳಿದೆ.

ಇತ್ತೀಚಿನ ಸುದ್ದಿ

Exit mobile version