ಕೆನರಾ ಬ್ಯಾಂಕ್ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆಗಳಿಂದ ಹಣದೋಚುತ್ತಿದ್ದಾರೆ ಕಳ್ಳರು!

ಔರಾದ ಪಟ್ಟಣದ ಕೆನರಾ ಬ್ಯಾಂಕ್ ಖಾತೆದಾರರ ಖಾತೆಗಳಿಂದ ಸಾವಿರಾರು ರೂಪಾಯಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಮೇ ತಿಂಗಳಲ್ಲಿ ಸಂತಪೂರ ಗ್ರಾಮದ ಮಲ್ಲಿಕಾರ್ಜುನ ತಂ ನಾಮದೇವ ಖಾತರೆ ಅವರ ಖಾತೆಯಿಂದ 90 ಸಾವಿರ ರೂಪಾಯಿ ಹಾಗೂ ಅಂಬಾದಾಸ ಸೋಮನಾಥ ನಳಗೆ ಅವರ ಖಾತೆಯಿಂದ 30,390 ರೂ ಹಣ ದೋಚಲಾಗಿದೆ. ಅಲ್ಲದೇ ಇನ್ನೂ ಹಲವರ ಕೆನರಾ ಬ್ಯಾಂಕ್ ಖಾತೆಗಳಿಂದ ಹಣ ದೋಚಲಾಗಿದೆ ಎಂದು ಗ್ರಾಹಕರು ದೂರಿದ್ದಾರೆ.
ಬ್ಯಾಂಕ್ ಖಾತೆಯಿಂದ ಹಣ ದೋಚಿದವರು ಯಾರು ಎಂದು ಪ್ರಶ್ನಿಸಿದರೆ, ಬ್ಯಾಂಕ್ ವ್ಯವಸ್ಥಾಪಕರು ಸರಿಯಾದ ಉತ್ತರ ನೀಡುತ್ತಿಲ್ಲ, ನಮಗೆ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಗ್ರಾಹಕರು ಸುಮ್ಮನೆ ಕೂರುವಂತಾಗಿದೆ. ಆನ್ ಲೈನ್ ಮೂಲಕ ಹಣ ದೋಚಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97